alex Certify
ಕನ್ನಡ ದುನಿಯಾ       Mobile App
       

Kannada Duniya

ಬಂಗಾರದ ಬದಲು ಈ ಲೋಹದ ಮೇಲೆ ಹೂಡಿಕೆ ಮಾಡಿ ಡಬಲ್ ಲಾಭ ಗಳಿಸಿ

ಭಾರತೀಯರಿಗೆ ಚಿನ್ನದ ಮೇಲೆ ವಿಪರೀತ ಮೋಹ. ಚಿನ್ನವನ್ನು ಆಪತ್ತಿನ ಕಾಲದ ಬಂಧು ಎಂದು ಕರೆಯಲಾಗುತ್ತದೆ. ಹಳ್ಳಿಗಳಲ್ಲಿ ಚಿನ್ನ ಖರೀದಿ ಮಾಡುವವರ ಸಂಖ್ಯೆ ಹೆಚ್ಚಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆಯಾಗ್ತಿದೆ. ಹಾಗಾಗಿ ಚಿನ್ನದ ಮೇಲಿದ್ದ ಭಾರತೀಯರ ಮೋಹ ಬದಲಾಗಿದೆ. ಚಿನ್ನದ ಬದಲು ಬೇರೆ ಲೋಹದ ಮೇಲೆ ಹೂಡಿಕೆ ಶುರು ಮಾಡಿದ್ದಾರೆ ಗ್ರಾಹಕರು.

ಭಾರತ ಸೇರಿದಂತೆ ವಿಶ್ವದಾದ್ಯಂತ ಜನರು ಚಿನ್ನದ ಬದಲು ಬೆಳ್ಳಿ ಮೇಲೆ ಹೂಡಿಕೆ ಹೆಚ್ಚು ಮಾಡ್ತಿದ್ದಾರೆ. ದೇಶದ ಗ್ರಾಮೀಣ ಪ್ರದೇಶದಲ್ಲಿ ಬೆಳ್ಳಿಗೆ ಬೇಡಿಕೆ ಹೆಚ್ಚಿದೆ. ಇದೇ ಕಾರಣಕ್ಕೆ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಇದನ್ನು ಗಮನಿಸಿರುವ ಹೂಡಿಕೆದಾರರು ಬೆಳ್ಳಿ ಮೇಲೆ ಹೆಚ್ಚಿನ ಒಲವು ತೋರುತ್ತಿದ್ದಾರೆ.

ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿರುವುದು ಕೂಡ ಬೆಳ್ಳಿ ಮೇಲೆ ಹೂಡಿಕೆ ಹೆಚ್ಚು ಮಾಡಲು ಕಾರಣವಾಗಿದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ಬೆಳ್ಳಿ ಆಮದು ಶೇಕಡಾ 10ರಷ್ಟು ಹೆಚ್ಚಾಗಿದೆ. ಇದ್ರ ಜೊತೆಗೆ ಬೆಳ್ಳಿ ಬೆಲೆ ಶೇಕಡಾ 3.29ರಷ್ಟು ಇಳಿಕೆ ಕಂಡಿದೆ. ಸದ್ಯ 10 ಗ್ರಾಂ ಬೆಳ್ಳಿ ಬೆಲೆ 39,000 ರೂಪಾಯಿಯಿದೆ. ಅದು 43,000ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಬೆಳ್ಳಿ ಮೇಲೆ ಹಣ ಹೂಡಿದ್ರೆ ಶೇಕಡಾ 10ರಷ್ಟು ಲಾಭವಾಗುವುದು ನಿಶ್ಚಿತ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...