alex Certify
ಕನ್ನಡ ದುನಿಯಾ       Mobile App
       

Kannada Duniya

ರೈತರಿಗೆ ‘ಭರ್ಜರಿ’ ಭಾಗ್ಯ: ಸಹಕಾರಿ ಸಾಲ ಸಂಪೂರ್ಣ ಮನ್ನಾ…?

ಬೆಂಗಳೂರು: ಇದೇ ಫೆಬ್ರವರಿ 16 ರಂದು ಬಜೆಟ್ ಮಂಡಿಸಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರೈತರಿಗೆ ಸಿಹಿಸುದ್ದಿ ನೀಡುವ ಸಾಧ್ಯತೆ ಇದೆ. ಚುನಾವಣೆ ಮೇಲೆ ಕಣ್ಣಿಟ್ಟಿರುವ ಸಿ.ಎಂ., ಸಹಕಾರಿ ಸಂಘಗಳ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಲು ಮುಂದಾಗಿದ್ದಾರೆ.

ಕಳೆದ ವರ್ಷ ಜೂನ್ ನಲ್ಲಿ ಸಹಕಾರ ಸಂಘಗಳ ಬೆಳೆಸಾಲವನ್ನು ಮನ್ನಾ ಮಾಡಿದ್ದ ಸಿ.ಎಂ., ಗರಿಷ್ಟ 50.000 ರೂ. ವರೆಗಿನ ಸಾಲ ಸೌಲಭ್ಯದಿಂದ ವಂಚಿತರಾದ ಸುಸ್ತಿದಾರರನ್ನು ಒಳಗೊಂಡಂತೆ ಸಂಪೂರ್ಣ ಬೆಳೆ ಸಾಲ ಮನ್ನಾ ಮಾಡುವ ತೀರ್ಮಾನ ಕೈಗೊಂಡಿದ್ದಾರೆ.

ಚುನಾವಣೆ ಮೇಲೆ ಕಣ್ಣಿಟ್ಟಿರುವ ಸಿದ್ಧರಾಮಯ್ಯ ರೈತರ ಓಲೈಕೆಗೆ ಸಹಕಾರಿ ಸಂಘಗಳಿಂದ ಸಾಲ ಪಡೆದುಕೊಂಡಿರುವ 22,27,506 ಮಂದಿ ರೈತರ ಸುಮಾರು 2600 ಕೋಟಿ ರೂ. ಮನ್ನಾ ಮಾಡುವ ಸಾಧ್ಯತೆ ಇದೆ.

ಬಜೆಟ್ ನಲ್ಲಿ ಸಿ.ಎಂ. ಈ ಘೋಷಣೆ ಮಾಡಿದರೂ, ಅದನ್ನು ಅನುಷ್ಠಾನ ಮಾಡಬೇಕಾದ ಹೊಣೆ ಮುಂದೆ ಅಧಿಕಾರಕ್ಕೆ ಬರುವ ಸರ್ಕಾರದ ಮೇಲಿರುತ್ತದೆ.

ಅಲ್ಲದೇ, ರೈತರ ಸಹಕಾರ ಸಂಘಗಳ ಸಾಲ ಮನ್ನಾ ಮಾಡಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ಸಾಲವನ್ನು ಮನ್ನಾ ಮಾಡಿ ಎಂದು ಕೇಂದ್ರದ ಮೇಲೆ ಒತ್ತಡ ಹೇರಬಹುದಾಗಿದೆ. ಚುನಾವಣೆ ಹೊಸ್ತಿಲಲ್ಲಿರುವುದರಿಂದ ಸಿ.ಎಂ. ಬಜೆಟ್ ನಲ್ಲಿ ಸಿಹಿ ಸುದ್ದಿ ನೀಡಲಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...