alex Certify
ಕನ್ನಡ ದುನಿಯಾ       Mobile App
       

Kannada Duniya

ʼವಾಯು ಮಾಲಿನ್ಯʼದಿಂದ ತತ್ತರಿಸಿರುವವರಿಗೆ 299 ರೂ.ಗಳಿಗೆ ಲಭ್ಯವಾಗ್ತಿದೆ ಶುದ್ದ ಗಾಳಿ

ದೀಪಾವಳಿ ಪಟಾಕಿ ಭರಾಟೆ ಹಾಗೂ ನೆರೆಯ ಪಂಜಾಬ್ ಮತ್ತು ಹರಿಯಾಣಗಳಲ್ಲಿ ಕಳೆ ಸುಡುತ್ತಿರುವ ಕಾರಣ ದೆಹಲಿಯ ವಾಯುಮಾಲಿನ್ಯದ ತಲೆನೋವು ಸಾಕಷ್ಟು ಹೆಚ್ಚಿದ್ದು, ಜನರಿಗೆ ಉಸಿರಾಟದ ತೊಂದರೆ ತಂದೊಡ್ಡಿದೆ.

ಈ ಕಾರಣದಿಂದ ತತ್ತರಿಸಿರುವ ತನ್ನ ಗ್ರಾಹಕರಿಗೆ ರಿಲೀಫ್ ಕೊಡಲೆಂದು ರಾಜಧಾನಿಯ ’ಆಕ್ಸಿ ಪ್ಯೂರ್‌’ ಆಮ್ಲಜನಕ ಪೂರೈಕೆದಾರ ಬಾರ್‌ ಒಂದು ಅತಿ ಕಡಿಮೆ ದರದಲ್ಲಿ ಶುದ್ಧ ಆಮ್ಲಜನಕ ಪೂರೈಕೆ ಮಾಡುತ್ತಿದೆ.

ಕಳೆದ ಮೇನಲ್ಲಿ ಆರಂಭಗೊಂಡ ಈ ಆಕ್ಸಿಜನ್ ಬಾರ್‌ ಏಳು ವಿವಿಧ ಅರೋಮಾ ಥೆರಪಿಗಳಲ್ಲಿ ಆಮ್ಲಜನಕವನ್ನು ಜನರಿಗೆ ಒದಗಿಸುತ್ತಿದೆ. 15 ನಿಮಿಷಗಳ ಈ ಥೆರಪಿಯಿಂದ ದೇಹವು ಉಲ್ಲಾಸಿತಗೊಂಡು ಜೀವಂತಿಕೆಯಿಂದ ನಳನಳಿಸುತ್ತದೆ ಎಂದು ಈ ಬಾರ್‌ನ ಸಿಬ್ಬಂದಿಯಲ್ಲಿ ಒಬ್ಬರಾದ ಬೋನಿ ಇರೆಂಗ್ಬಮ್ ಹೇಳಿಕೊಂಡಿದ್ದಾರೆ. 299 ರೂ.ಗಳಿಗೆ ಈ 15 ನಿಮಿಷಗಳ ಥೆರಪಿಯನ್ನು ಪಡೆದುಕೊಳ್ಳಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...