alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಾರಾಷ್ಟ್ರದಲ್ಲಿನ್ನು 24 ಗಂಟೆಯೂ ಅಂಗಡಿಗಳು ಓಪನ್

ಮಹಾರಾಷ್ಟ್ರ ಸರ್ಕಾರ ತನ್ನ ಶಾಪ್ಸ್ & ಎಸ್ಟಾಬ್ಲಿಶ್ಮೆಂಟ್ಸ್ ಆ್ಯಕ್ಟ್ ಗೆ ತಿದ್ದುಪಡಿ ತಂದಿದೆ. ಹೊಸ ನಿಯಮದ ಪ್ರಕಾರ ಮಳಿಗೆಗಳು 24 ಗಂಟೆಯೂ ತೆರೆದಿರಬಹುದು. ಈ ಮೊದಲು ವಾಣಿಜ್ಯ ಮಳಿಗೆಗಳನ್ನು ರಾತ್ರಿ 9.30ಕ್ಕೆ, ಅಂಗಡಿಗಳನ್ನು 10 ಗಂಟೆಗೆ ಹಾಗೂ ರೆಸ್ಟೋರೆಂಟ್ ಗಳನ್ನು 12.30ಕ್ಕೆ ಬಂದ್ ಮಾಡಬೇಕೆಂಬ ನಿಯಮವಿತ್ತು.

ಇನ್ಮೇಲೆ ಮೂರು ಶಿಫ್ಟ್ ಗಳಲ್ಲೂ ದಿನದ 24 ಗಂಟೆಗಳ ಕಾಲ ಅಂಗಡಿಗಳನ್ನು ತೆರೆದಿಡಬಹುದು. ಈ ಮೂಲಕ ಮತ್ತಷ್ಟು ಜನರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶ ಸರ್ಕಾರದ್ದು ಅಂತಾ ಮಹಾರಾಷ್ಟ್ರದ ಸಚಿವ ಸಂಭಾಜಿ ನೀಲಂಗೇಕರ್ ಪಾಟೀಲ್ ತಿಳಿಸಿದ್ದಾರೆ. ಹೋಟೆಲ್, ರೆಸ್ಟೋರೆಂಟ್ ಮತ್ತು ಮಾಲ್ ಗಳಿಗೂ ಹೊಸ ನಿಯಮ ಅನ್ವಯವಾಗುತ್ತದೆ.

ಆದ್ರೆ ಬಾರ್, ಪಬ್, ವೈನ್ ಶಾಪ್ ಮತ್ತು ಡಿಸ್ಕೋಥೆಕ್ ಗಳನ್ನು 24 ಗಂಟೆಯೂ ತೆರೆದಿಡುವಂತಿಲ್ಲ. ಹೊಸ ಶಿಫ್ಟ್ ಗಳಲ್ಲಿ ಮಹಿಳೆಯರು ರಾತ್ರಿ 9.30 ರಿಂದ ಬೆಳಗ್ಗೆ 7 ಗಂಟೆವರೆಗೆ ನೈಟ್ ಶಿಫ್ಟ್ ನಲ್ಲಿ ಕೆಲಸ ಮಾಡಬಹುದು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...