alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 66 ರೂ.ಗೆ ಶುರು ಮಾಡಿ ಆನ್ಲೈನ್ ಬ್ಯುಸಿನೆಸ್

ಆನ್ಲೈನ್ ವ್ಯಾಪಾರಿಗಳಿಗೊಂದು ಖುಷಿ ಸುದ್ದಿ. ಮನೆಯಲ್ಲಿಯೇ ವಸ್ತುಗಳನ್ನು ತಯಾರಿಸಿ ಆನ್ಲೈನ್ ನಲ್ಲಿ ಮಾರಾಟ ಮಾಡಲು ಬಯಸಿದ್ದರೆ ಇನ್ಮುಂದೆ ನಿಮ್ಮ ಕೆಲಸ ಸುಲಭವಾಗಲಿದೆ. ಕೇವಲ ಒಂದು ಡಾಲರ್ ಅಂದ್ರೆ 66 ರೂಪಾಯಿಗೆ ಆನ್ಲೈನ್ ಮಾರಾಟ ಶುರು ಮಾಡಬಹುದು. ಅಂತರಾಷ್ಟ್ರೀಯ ಈ ಕಾಮರ್ಸ್ ಕಂಪನಿ ಶಾಪ್ಮ್ಯಾಟಿಕ್ ಈ ವಿಶೇಷ ಕೊಡುಗೆಯನ್ನು ನೀಡ್ತಿದೆ.

ಕಂಪನಿ ತನ್ನ ತಂತ್ರಜ್ಞಾನವನ್ನು ಮಾತ್ರ ನಿಮ್ಮ ಬಳಕೆಗೆ ನೀಡ್ತಿಲ್ಲ. ಹೆಚ್ಚುವರಿ ದಾಸ್ತಾನು ಹಾಗೂ ಪ್ರಚಾರ, ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುವ ಕೆಲಸವನ್ನೂ ಮಾಡಲಿದೆ. ದೇಶದ ಹೊಸ ವ್ಯಾಪಾರಿಗಳಿಗೆ ಉತ್ತೇಜನ ನೀಡಲು ಕಂಪನಿ ಈ ಕೆಲಸಕ್ಕೆ ಕೈ ಹಾಕಿದೆ. ಇದಕ್ಕಾಗಿ ಕಂಪನಿ ಇನ್ಸ್ಪ್ರಾಯಿಂಗ್ ಎಂಟರ್ಪ್ರೆನ್ಯೂರ್ಷಿಪ್ ಪ್ರೋಗ್ರಾಂ ಶುರು ಮಾಡಿದೆ.

ಈ ಯೋಜನೆಯಡಿ ಮೂರು ತಿಂಗಳವರೆಗೆ ಉದ್ಯಮಿಗಳು ಆನ್ಲೈನ್ ಸ್ಟೋರೇಜ್ ಶುರು ಮಾಡಲು 66 ರೂಪಾಯಿ ನೀಡಿದ್ರಾಯ್ತು. ಆನ್ಲೈನ್ ಸ್ಟೋರೇಜ್ ಉಳಿಸಿಕೊಳ್ಳಲು ಮೂರು ತಿಂಗಳ ನಂತ್ರ 20 ಡಾಲರ್ ನೀಡಬೇಕಾಗುತ್ತದೆ.

ಭಾರತದಲ್ಲಿ ಉದ್ಯಮ ಐಡಿಯಾ ಹೊಂದಿದವರ ಸಂಖ್ಯೆ ಹೆಚ್ಚಿದೆ. ಮನೆಯಲ್ಲಿಯೇ ಸುಂದರ ವಸ್ತುಗಳನ್ನು ಅನೇಕರು ತಯಾರಿಸುತ್ತಾರೆ. ಆದ್ರೆ ಅದ್ರ ಮಾರಾಟಕ್ಕೆ ಸೂಕ್ತ ವೇದಿಕೆ ಸಿಗ್ತಿಲ್ಲ ಈಗ ಶಾಪ್ಮ್ಯಾಟಿಕ್ ಉತ್ಸಾಹಿ ಉದ್ಯಮಿಗಳಿಗೆ ಅತ್ಯುತ್ತಮ ವೇದಿಕೆ ಒದಗಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...