alex Certify
ಕನ್ನಡ ದುನಿಯಾ       Mobile App
       

Kannada Duniya

ಷೇರು ಮಾರುಕಟ್ಟೆಯಲ್ಲಿ ಐತಿಹಾಸಿಕ ದಾಖಲೆ

download-1

ಮೋದಿ ಸರ್ಕಾರ ಮೂರು ವರ್ಷ ಪೂರೈಸಿದ ಸಂಭ್ರಮಾಚರಣೆಯಲ್ಲಿರುವಾಗಲೇ ಮುಂಬೈ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಷೇರುದಾರರ ಮುಖದಲ್ಲಿ ನಗು ಮೂಡಿದೆ. ಷೇರು ಸೂಚ್ಯಾಂಕ 31 ಸಾವಿರ ಅಂಕಗಳ ಗಡಿ ದಾಟಿ ದಾಖಲೆ ನಿರ್ಮಾಣ ಮಾಡಿದೆ.

ಶುಕ್ರವಾರ ಮಧ್ಯಾಹ್ನದ ವೇಳೆಗೆ 280 ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್ 31,000 ಅಂಕಗಳಿಗೆ ಬಂದು ನಿಂತಿದೆ. ಷೇರು ಮಾರುಕಟ್ಟೆಯಲ್ಲಿ ಇದು ಇತಿಹಾಸವಾಗಿದ್ದು, ಮೊಟ್ಟ ಮೊದಲ ಬಾರಿಗೆ ಸೆನ್ಸೆಕ್ಸ್ 31 ಸಾವಿರ ಅಂಕಗಳ ಗಡಿ ದಾಟಿದೆ. ಒಂದು ಗಂಟೆ 37 ನಿಮಿಷಕ್ಕೆ ಸೂಚ್ಯಾಂಕ 280 ಅಂಕ ಏರಿಕೆಯಾಗಿ 31 ಸಾವಿರದ ಗಡಿ ದಾಟಿತು. ಇದೇ ರೀತಿ ರಾಷ್ಟ್ರೀಯ ಷೇರು ಸೂಚ್ಯಾಂಕ ನಿಫ್ಟಿ ಕೂಡ ದಾಖಲೆ ನಿರ್ಮಿಸುತ್ತ 9,584 ಅಂಕಗಳಿಗೆ ಬಂದು ನಿಂತಿದೆ.

ಐಸಿಐಸಿಐ, ವೇದಾಂತ್, ಟಾಟಾ ಸ್ಟೀಲ್, ಏಷ್ಯನ್ ಪೇಂಟ್, ರಿಲಾಯನ್ಸ್ ಕಂಪನಿಗಳು ಹೆಚ್ಚು ಲಾಭ ಕಂಡಿವೆ. ಆಟೋಮೊಬೈಲ್ ಕ್ಷೇತ್ರದ ಉತ್ತಮ ಬೆಳವಣಿಗೆ ಇದಕ್ಕೆ ಕಾರಣ ಎನ್ನಲಾಗ್ತಾ ಇದೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತ್ರ ಇದೇ ಮೊದಲಲ್ಲ. ಈ ಹಿಂದೆ ಕೂಡ ಷೇರು ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...