alex Certify
ಕನ್ನಡ ದುನಿಯಾ       Mobile App
       

Kannada Duniya

ಷೇರು ಮಾರುಕಟ್ಟೆಯಲ್ಲಿ ಚೇತರಿಕೆ: ರೂಪಾಯಿ ಮೌಲ್ಯದಲ್ಲಿ ಏರಿಕೆ

ಈ ವಾರದ ಮೂರನೇ ದಿನ ಷೇರು ಮಾರುಕಟ್ಟೆ ವೇಗದ ಆರಂಭ ಕಂಡಿದೆ. ಬುಧವಾರ ಷೇರು ಮಾರುಕಟ್ಟೆಯಲ್ಲಿ ಏರಿಕೆ ಕಂಡು ಬಂದಿದೆ. ಸೆನ್ಸೆಕ್ಸ್ 117 ಅಂಕ ಹೆಚ್ಚಳವಾಗಿದೆ. ನಿಫ್ಟಿಯಲ್ಲಿ ಕೂಡ 26 ಅಂಕ ಹೆಚ್ಚಳ ಕಂಡುಬಂದಿದೆ.

ಸೆನ್ಸೆಕ್ಸ್ ಬುಧವಾರ 116.98 ಅಂಕಗಳೊಂದಿಗೆ 34416.45 ರ ಮಟ್ಟದಲ್ಲಿ ವಹಿವಾಟು ಆರಂಭಿಸಿದೆ. ನಿಫ್ಟಿ 26 ಅಂಕಗಳ ಹೆಚ್ಚಳದೊಂದಿಗೆ 10327 ರ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಆರಂಭದಲ್ಲಿಯೇ 335 ಷೇರುಗಳಲ್ಲಿ ಹೆಚ್ಚಳವಾಗಿದೆ. 151 ಷೇರುಗಳಲ್ಲಿ ಇಳಿಕೆ ಕಂಡು ಬಂದಿದೆ. 2878 ಷೇರುಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಬುಧವಾರ ರೂಪಾಯಿ ಮೌಲ್ಯದಲ್ಲಿಯೂ ಏರಿಕೆ ಕಂಡು ಬಂದಿದೆ. ಡಾಲರ್ ಎದುರು ರೂಪಾಯಿ ಇಂದು 24 ಪೈಸೆ ಹೆಚ್ಚಳ ಕಂಡಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 74.15 ಮಟ್ಟ ತಲುಪಿದೆ. ಮಂಗಳವಾರ ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆ ಮಟ್ಟದಲ್ಲಿ ಇಳಿಕೆ ಕಂಡಿತ್ತು. ಬೆಲೆ ಏರಿಕೆ ಬಿಸಿ ಭಯ ಹೆಚ್ಚಿಸಿತ್ತು. ಆದ್ರೆ ನವರಾತ್ರಿಯ ಮೊದಲ ದಿನ ಶುಭ ಸಂಕೇತ ಸಿಕ್ಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...