alex Certify
ಕನ್ನಡ ದುನಿಯಾ       Mobile App
       

Kannada Duniya

RBI ಕ್ರೆಡಿಟ್ ಪಾಲಿಸಿಗೂ ಮುನ್ನವೇ ಇಳಿಕೆ ಕಂಡ ಷೇರು ಮಾರುಕಟ್ಟೆ

ಶುಕ್ರವಾರವೂ ಷೇರು ಮಾರುಕಟ್ಟೆ ಪರಿಸ್ಥಿತಿ ಸುಧಾರಿಸಿಲ್ಲ. ಆರಂಭದಲ್ಲಿಯೇ ಸೆನ್ಸೆಕ್ಸ್, ನಿಫ್ಟಿಯಲ್ಲಿ ಇಳಿಕೆ ಕಂಡು ಬಂದಿದೆ. ರೂಪಾಯಿ ಮೌಲ್ಯದಲ್ಲಿ ಇಳಿಕೆ ಹಾಗೂ ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿನ ಬೆಳವಣಿಗೆ ಷೇರು ವಹಿವಾಟಿನಲ್ಲಾಗಿದೆ.

ಸೆನ್ಸೆಕ್ಸ್ 300 ಅಂಕ ಕುಸಿತ ಕಂಡು 35,000 ಪಾಯಿಂಟ್ ನಲ್ಲಿ ವಹಿವಾಟು ನಡೆಸುತ್ತಿದೆ. ಇನ್ನು ನಿಫ್ಟಿ 10,500 ನಷ್ಟು ಕೆಳಗಿಳಿದಿದೆ. ಸೆನ್ಸೆಕ್ಸ್ ಹಾಗೂ ನಿಫ್ಟಿಯಲ್ಲಿ ಶೇಕಡಾ 0.5 ರಷ್ಟು ಇಳಿಕೆ ಶುಕ್ರವಾರ ಕಂಡು ಬಂದಿದೆ. ಬೆಳಿಗ್ಗೆ 10.30 ರ ಸುಮಾರಿಗೆ ಸೆನ್ಸೆಕ್ಸ್ 184 ಅಂಕ ಅಂದ್ರೆ ಶೇಕಡಾ 0.52 ರಷ್ಟು ಇಳಿಕೆ ಕಂಡು 34,984 ಪಾಯಿಂಟ್ ನಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ 86 ಅಂಕ ಕುಸಿತ ಕಂಡು 10,513 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.

ಆಯಿಲ್ ಹಾಗೂ ಗ್ಯಾಸ್ ಕಂಪನಿಗಳ ಷೇರಿನಲ್ಲಿ ಶುಕ್ರವಾರ ಭಾರೀ ಇಳಿಕೆ ಕಂಡು ಬಂದಿದೆ. ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆ ಇದಕ್ಕೆ ಕಾರಣ ಎನ್ನಲಾಗ್ತಿದೆ. ಗುರುವಾರ ಕೇಂದ್ರ ಸರ್ಕಾರ ಪೆಟ್ರೋಲ್-ಡಿಸೇಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿದೆ. ಇದು ಷೇರು ಇಳಿಕೆಗೆ ಕಾರಣವಾಗಿದೆ. ರಿಸರ್ವ್ ಬ್ಯಾಂಕ್ ಕ್ರೆಡಿಟ್ ಪಾಲಿಸಿಗೂ ಮುನ್ನವೇ ಷೇರಿನಲ್ಲಿ ಇಳಿಕೆ ಕಂಡು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...