alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಕರ ನಡುವೆ ನೋಟಿನ ಜಟಾಪಟಿ

ನವದೆಹಲಿ: ಕಳೆದ ನವೆಂಬರ್ ನಲ್ಲಿ ನೋಟ್ ಅಮಾನ್ಯೀಕರಣವಾದ ಬಳಿಕ ವಾಪಸ್ ಬಂದಿರುವ ನೋಟುಗಳ ಕುರಿತಾಗಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ.) ಅಂಕಿ ಅಂಶಗಳನ್ನು ನೀಡಿದ ಬೆನ್ನಲ್ಲೇ ಜಟಾಪಟಿ ಶುರುವಾಗಿದೆ.

ನೋಟ್ ಅಮಾನ್ಯಕ್ಕೆ ಶಿಫಾರಸು ಮಾಡಿದ ರಿಸರ್ವ್ ಬ್ಯಾಂಕ್ ಮತ್ತು ಕ್ರಮ ಕೈಗೊಂಡ ಕೇಂದ್ರ ಸರ್ಕಾರದ ತೀರ್ಮಾನ ನಾಚಿಕೆಗೇಡು ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಟೀಕಿಸಿದ್ದಾರೆ.

ನೋಟ್ ಬ್ಯಾನ್ ಬಳಿಕ ಆರ್.ಬಿ.ಐ.ಗೆ 16,000 ಕೋಟಿ ರೂ. ಬಂದಿದೆ. ಹೊಸ ನೋಟ್ ಮುದ್ರಣಕ್ಕೆ 21,000 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದಕ್ಕೆ ಸಲಹೆ ನೀಡಿದ ಅರ್ಥಶಾಸ್ತ್ರಜ್ಞರು ನೊಬೆಲ್ ಪ್ರಶಸ್ತಿಗೆ ಅರ್ಹರಾಗಿದ್ದಾರೆ ಎಂದು ಚಿದಂಬರಂ ವ್ಯಂಗ್ಯವಾಡಿದ್ದಾರೆ.

ಬ್ಯಾನ್ ಆದ ಶೇ.1 ರಷ್ಟು ನೋಟ್ ಮಾತ್ರ ವಾಪಸ್ ಬಂದಿಲ್ಲ. ಬ್ಲಾಕ್ ಮನಿಯನ್ನು ಸಕ್ರಮಗೊಳಿಸುವ ಸಲುವಾಗಿ ನೋಟ್ ಅಮಾನ್ಯೀಕರಣ ಮಾಡಲಾಯಿತೇ ಎಂದು ಪ್ರಶ್ನಿಸಿರುವ ಅವರು, ಇದೊಂದು ನಾಚಿಕೆಗೇಡಿನ ತೀರ್ಮಾನವಾಗಿತ್ತು ಎಂದು ದೂರಿದ್ದಾರೆ.

ಆದರೆ, ಇದನ್ನು ತಳ್ಳಿಹಾಕಿರುವ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ, ನಗದು ಆರ್ಥಿಕ ವ್ಯವಸ್ಥೆ ಹೊಂದಿರುವ ಭಾರತದಲ್ಲಿ ಗಣನೀಯವಾದ ಬದಲಾವಣೆಯನ್ನು ತರುವ ಉದ್ದೇಶದಿಂದ ಅಮಾನ್ಯೀಕರಣ ಕೈಗೊಳ್ಳಲಾಗಿತ್ತು. ನೋಟುಗಳನ್ನು ವಾಪಸ್ ಪಡೆಯುವುದಷ್ಟೇ ನಮ್ಮ ಉದ್ದೇಶವಾಗಿರಲಿಲ್ಲ ಎಂದು ತಿಳಿಸಿದ್ದಾರೆ.

ಬ್ಲಾಕ್ ಮನಿಗೆ ಕಡಿವಾಣ, ತೆರಿಗೆ ಸುಧಾರಣೆ, ಜನರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಒಳಪಡಿಸುವುದು, ನಗದು ರಹಿತ ವಹಿವಾಟಿಗೆ ಉತ್ತೇಜನ ಹೀಗೆ ಹಲವು ಉದ್ದೇಶದಿಂದ ನೋಟ್ ಡಿಮಾನಿಟೈಸೇಷನ್ ಮಾಡಲಾಗಿದೆ. ಒಂದೇ ಒಂದು ಉದ್ದೇಶದಿಂದ ಕೈಗೊಂಡ ತೀರ್ಮಾನ ಅದಲ್ಲ. ಬ್ಯಾನ್ ಆದ ನೋಟುಗಳು ಮತ್ತು ವಾಪಸ್ ಬಂದ ನೋಟುಗಳ ಅಂಕಿ ಸಂಖ್ಯೆ ಗಮನಿಸುವ ಬದಲು ಸರ್ಕಾರದ ಉದ್ದೇಶವನ್ನು ಅರ್ಥಮಾಡಿಕೊಳ್ಳಬೇಕಿದೆ. ಟೀಕೆ ಮಾಡುವವರಿಗೆ ಇದು ಅರ್ಥವಾಗುತ್ತಿಲ್ಲ ಎಂದು ಜೇಟ್ಲಿ ತಿರುಗೇಟು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...