alex Certify
ಕನ್ನಡ ದುನಿಯಾ       Mobile App
       

Kannada Duniya

ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ: ಸಾವಿರ ಪಾಯಿಂಟ್ ಕುಸಿದ ಸೆನ್ಸೆಕ್ಸ್

ಶುಕ್ರವಾರ ಷೇರುಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲವಾಗಿದೆ. ಸೆನ್ಸೆಕ್ಸ್ ಹಾಗೂ ನಿಫ್ಟಿ ಸೂಚ್ಯಾಂಕದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸೆನ್ಸೆಕ್ಸ್ 1 ಸಾವಿರ ಅಂಕ ಕುಸಿತ ಕಂಡಿದೆ. ನಿಫ್ಟಿ ಸೂಚ್ಯಾಂಕ 11000ಕ್ಕೆ ಬಂದು ನಿಂತಿದೆ. ನಂತ್ರ ನಿಧಾನವಾಗಿ ಸುಧಾರಣೆ ಕಾಣ್ತಿದೆ.

ಗುರುವಾರ ಮೊಹರಂ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ಬಂದ್ ಆಗಿತ್ತು. ಶುಕ್ರವಾರ ಷೇರು ಮಾರುಕಟ್ಟೆ ವ್ಯವಹಾರ ಶುರುವಾಗ್ತಿದ್ದಂತೆ ಒಳ್ಳೆ ಏರಿಕೆ ಕಂಡು ಬಂದಿತ್ತು. ಬೆಳಿಗ್ಗೆ ಸೆನ್ಸೆಕ್ಸ್ 172 ಅಂಕ ಹಾಗೂ ನಿಫ್ಟಿ 69 ಅಂಕ ಏರಿಕೆ ಕಂಡಿತ್ತು. ಸಮಯ ಕಳೆಯುತ್ತಿದ್ದಂತೆ ಇಳಿಯುತ್ತ ಬಂದ ಸೆನ್ಸೆಕ್ಸ್ ಮಧ್ಯಾಹ್ನ 1ರ ವೇಳೆಗೆ ಒಂದು ಸಾವಿರ ಪಾಯಿಂಟ್ ಕುಸಿಯಿತು.

ಇನ್ನು ಯಸ್ ಬ್ಯಾಂಕ್ ನಲ್ಲಾದ ಬದಲಾವಣೆ ಷೇರಿನ ಮೇಲೂ ಕಂಡು ಬಂದಿದೆ. ಯಸ್ ಬ್ಯಾಂಕ್ ಕಾರ್ಯನಿರ್ವಾಹಣಾಧಿಕಾರಿ ರಾಣಾ ಕಪೂರ್ ತಮ್ಮ ಸ್ಥಾನದಿಂದ ಇಳಿಯುವಂತೆ ರಿಸರ್ವ್ ಬ್ಯಾಂಕ್ ತಿಳಿಸಿದೆ. ಈ ಬೆಳವಣಿಗೆಯಿಂದ ಯಸ್ ಬ್ಯಾಂಕ್ ಷೇರು ಕುಸಿತ ಕಂಡಿದೆ. ಶುಕ್ರವಾರ ಆರಂಭದಿಂದಲೇ ಯಸ್ ಬ್ಯಾಂಕ್ ಷೇರು ಇಳಿದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...