alex Certify
ಕನ್ನಡ ದುನಿಯಾ       Mobile App
       

Kannada Duniya

ಮಿನರಲ್ ವಾಟರ್ ಗೆ MRPಗಿಂತ ಹೆಚ್ಚು ಹಣ ಪಡೆದ್ರೆ ಜೈಲು!

ಮಿನರಲ್ ವಾಟರ್ ಬಾಟಲಿಗಳನ್ನು ಎಂ ಆರ್ ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಹೋಟೆಲ್, ರೆಸ್ಟೋರೆಂಟ್ ಹಾಗೂ ಮಲ್ಟಿಪ್ಲೆಕ್ಸ್ ಗಳಿಗೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ. ಎಂ ಆರ್ ಪಿ ಗಿಂತ ಹೆಚ್ಚಿನ ಬೆಲೆ ವಿಧಿಸುವುದರಿಂದ ಗ್ರಾಹಕರಿಗೆ ಅನ್ಯಾಯವಾಗುವುದು ಮಾತ್ರವಲ್ಲ, ತೆರಿಗೆ ವಂಚನೆಯೂ ಹೌದು ಅಂತಾ ಅಭಿಪ್ರಾಯಪಟ್ಟಿದೆ.

ಹೋಟೆಲ್, ರೆಸ್ಟೋರೆಂಟ್ ಮತ್ತು ಮಲ್ಟಿಪ್ಲೆಕ್ಸ್ ಗಳು ಸಾಮಾನ್ಯ ದರದಲ್ಲಿ ನೀರಿನ ಬಾಟಲಿಗಳನ್ನು ಖರೀದಿಸಿರುತ್ತವೆ. ನಂತರ ಎಂ ಆರ್ ಪಿಗೆ ಅವುಗಳನ್ನು ಮಾರಾಟ ಮಾಡದೆ ಗ್ರಾಹಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತವೆ. ಇದರಿಂದ ಸರ್ಕಾರಕ್ಕೆ ಬರಬೇಕಾಗಿದ್ದ ಹೆಚ್ಚುವರಿ ಆದಾಯ ಖೋತಾ ಆಗುತ್ತದೆ ಅಂತಾ ಕೇಂದ್ರ ಹೇಳಿದೆ.

ಈ ಸಂಬಂಧ FHRAI ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಅದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಅಫಿಡವಿಟ್ ಸಲ್ಲಿಸಿದೆ. ಈ ರೀತಿ ಹೆಚ್ಚುವರಿ ಬೆಲೆ ಪಡೆಯುವುದು ಕಾನೂನಿನ ಪ್ರಕಾರ ಅಪರಾಧ ಅಂತಾ ಹೇಳಿದೆ. ಮೊದಲ ಅಪರಾಧಕ್ಕೆ 25,000, ಎರಡನೇ ಅಪರಾಧಕ್ಕೆ 50,000 ರೂ. ದಂಡ ವಿಧಿಸಲಾಗುತ್ತದೆ. ಮತ್ತದೇ ತಪ್ಪು ಮಾಡಿದ್ರೆ 1 ಲಕ್ಷ ರೂ. ದಂಡ ಹಾಗೂ 1 ವರ್ಷ ಜೈಲು ಶಿಕ್ಷೆ ಕೂಡ ವಿಧಿಸಬಹುದು.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...