alex Certify
ಕನ್ನಡ ದುನಿಯಾ       Mobile App
       

Kannada Duniya

SBI ಗ್ರಾಹಕರಿಗೆ ಗಣಪತಿ ಹಬ್ಬದ ಬೋನಸ್….

sbi-621x414

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಹಬ್ಬದ ಹಿನ್ನೆಲೆಯಲ್ಲಿ ಭರ್ಜರಿ ಬೋನಸ್ ಕೊಡ್ತಾ ಇದೆ. ವೈಯಕ್ತಿಕ ಸಾಲಗಳ ಮೇಲಿನ ಪ್ರೊಸೆಸಿಂಗ್ ಶುಲ್ಕವನ್ನು  ಕಡಿತ ಮಾಡುವುದಾಗಿ ಹೇಳಿದೆ. ಕಾರ್ ಲೋನ್, ಗೋಲ್ಡ್ ಲೋನ್ ಸೇರಿದಂತೆ ಇತರ ವೈಯಕ್ತಿಕ ಸಾಲಗಳಿಗೆ ಪ್ರೊಸೆಸಿಂಗ್ ಫೀ ವಿಧಿಸುವುದಿಲ್ಲ ಅಂತಾ ಪ್ರಕಟಿಸಿದೆ.

2017ರ ಡಿಸೆಂಬರ್ 31ರವರೆಗೆ ಪಡೆಯುವ ಕಾರ್ ಲೋನ್ ಅರ್ಜಿಗಳಿಗೆ ಈ ಕೊಡುಗೆ ಅನ್ವಯವಾಗಲಿದೆ. 2017ರ ಅಕ್ಟೋಬರ್ 31ರವರೆಗೆ ಪಡೆಯುವ ಗೋಲ್ಡ್ ಲೋನ್ ಅರ್ಜಿಗಳಿಗೆ ಶೇ.50ರಷ್ಟು ಪ್ರೊಸೆಸಿಂಗ್ ಶುಲ್ಕ ಕಡಿತ ಮಾಡಲಿದೆ.

ಬ್ಯಾಂಕ್ ನೀಡುವ ವೈಯಕ್ತಿಕ ಸಾಲ ಎಕ್ಸ್ ಪ್ರೆಸ್ ಕ್ರೆಡಿಟ್ ಮೇಲೆ ಸೆಪ್ಟೆಂಬರ್ 30ರವರೆಗೆ ಶೇ.50ರಷ್ಟು ಶುಲ್ಕ ಕಡಿತ ಮಾಡಲಾಗುತ್ತದೆ. ಉಳಿತಾಯ ಖಾತೆ ಬಡ್ಡಿದರ ಇಳಿಕೆ ಮಾಡುವ ಮೂಲಕ ಗ್ರಾಹಕರಿಗೆ ಶಾಕ್ ಕೊಟ್ಟಿದ್ದ ಎಸ್ ಬಿ ಐ ಈಗ ಸಮಾಧಾನಕರ ಸುದ್ದಿ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...