alex Certify
ಕನ್ನಡ ದುನಿಯಾ       Mobile App
       

Kannada Duniya

ರದ್ದಾಯ್ತು ಎಸ್.ಬಿ.ಐ. ಉಳಿತಾಯ ಖಾತೆ ಸ್ಥಗಿತ ಶುಲ್ಕ

ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್.ಬಿ.ಐ.) ಉಳಿತಾಯ ಖಾತೆ ಸ್ಥಗಿತದ ಶುಲ್ಕವನ್ನು ರದ್ದುಗೊಳಿಸಿದೆ.

ಅಕ್ಟೋಬರ್ 1 ರಿಂದಲೇ ಹೊಸ ನಿಯಮ ಜಾರಿಗೆ ಬಂದಿದ್ದು, ಉಳಿತಾಯ ಖಾತೆ ಸ್ಥಗಿತಗೊಳಿಸಲು ವಿಧಿಸಲಾಗುತ್ತಿದ್ದ ಶುಲ್ಕವನ್ನು ರದ್ದು ಮಾಡಲಾಗಿದೆ.

ಎಸ್.ಬಿ.ಐ.ನಲ್ಲಿ ಉಳಿತಾಯ ಖಾತೆ ತೆರೆದು 1 ವರ್ಷವಾಗಿದ್ದವರಿಗೆ ಶುಲ್ಕ ರದ್ದು ನಿಯಮ ಅನ್ವಯಿಸಲಿದೆ. ಈ ಮೊದಲು ಉಳಿತಾಯ ಖಾತೆ ರದ್ದುಪಡಿಸಿದಲ್ಲಿ 500 ರೂ. ಶುಲ್ಕ ಮತ್ತು ಜಿ.ಎಸ್.ಟಿ. ಕಟ್ಟಬೇಕಿತ್ತು.

ಇನ್ನು ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ ಖಾತೆದಾರರಿಗೆ ದಂಡ ವಿಧಿಸಲಾಗುತ್ತಿತ್ತು. ಇದಕ್ಕೆ ಗ್ರಾಹಕರಿಂದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಮೆಟ್ರೋ ನಗರಗಳ ಕನಿಷ್ಠ ಬ್ಯಾಲೆನ್ಸ್ ಅನ್ನು 5000 ರೂ.ನಿಂದ 3000 ರೂ.ಗೆ ಇಳಿಕೆ ಮಾಡಲಾಗಿತ್ತು. ಈಗ ಖಾತೆ ಸ್ಥಗಿತಗೊಳಿಸುವ ಶುಲ್ಕವನ್ನು ರದ್ದುಪಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...