alex Certify
ಕನ್ನಡ ದುನಿಯಾ       Mobile App
       

Kannada Duniya

ಎಸ್.ಬಿ.ಐ. ಗ್ರಾಹಕರಿಗೊಂದು ಮುಖ್ಯ ಮಾಹಿತಿ

ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಮೊಬೈಲ್ ಅಪ್ಲಿಕೇಷನ್ ಗಳಿಗಾಗಿ ಮಲ್ಟಿಪಲ್ ಬಯೋಮೆಟ್ರಿಕ್ ವ್ಯವಸ್ಥೆ ಪರಿಚಯಕ್ಕೆ ನಿರ್ಧರಿಸಿದೆ. ಅಂದ್ರೆ ಎಸ್.ಬಿ.ಐ. ಅಪ್ಲಿಕೇಷನ್ ಮೂಲಕ ವ್ಯವಹಾರ ನಡೆಸುವ ವೇಳೆ ಬೆರಳಿನ ಗುರುತು, ಮುಖ ಗುರುತು ಅಥವಾ ಧ್ವನಿ ಗುರುತನ್ನು ನೀವು ಬಳಸಬಹುದಾಗಿದೆ.

ಎಸ್.ಬಿ.ಐ., ಮೊಬೈಲ್ ವಾಲೆಟ್ ಹಾಗೂ ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ವ್ಯವಹಾರಕ್ಕೆ ಬಯೋಮೆಟ್ರಿಕ್ ಸಿಸ್ಟಂ ಜಾರಿಗೆ ತರುವ ಯೋಜನೆ ಮೇಲೆ ಕೆಲಸ ಮಾಡ್ತಿದೆ. ಸೂಕ್ತ ಸರ್ವೀಸ್ ನೀಡುವವರ ಹುಡುಕಾಟದಲ್ಲಿ ಎಸ್.ಬಿ.ಐ. ಇದೆ. ಈ ಸೇವೆ ಶುರು ಮಾಡುವ ಮೊದಲು ತಜ್ಞರ ಅಭಿಪ್ರಾಯವನ್ನು ಪಡೆಯಲಿದೆ.

ಎಸ್.ಬಿ.ಐ. ತನ್ನ ಮೊಬೈಲ್ ಆ್ಯಪನ್ನು ಆರ್ಥಿಕ ಮಾರುಕಟ್ಟೆ ರೂಪದಲ್ಲಿ ಬದಲಾಯಿಸುತ್ತಿದೆ. ಈವರೆಗೆ ಎಸ್.ಬಿ.ಐ. ಮೊಬೈಲ್ ಆ್ಯಪನ್ನು 83 ಲಕ್ಷ ಮಂದಿ ಡೌನ್ಲೋಡ್ ಮಾಡಿದ್ದಾರೆ. ಆ್ಯಪ್ ಮೂಲಕ ಇನ್ನೂ 10 ಲಕ್ಷ ಹೊಸ ಅಕೌಂಟ್ ತೆರೆಯಲಾಗುವುದು. ಇದ್ರ ಹೊರತಾಗಿ ಬ್ಯಾಂಕ್ ವ್ಯವಹಾರದಲ್ಲಿ ಪಿಒಎಸ್ ಪಾತ್ರ ಮಹತ್ವದ್ದು.  ಕಳೆದ ವರ್ಷ ಬ್ಯಾಂಕಿನ ಒಟ್ಟು ವಹಿವಾಟಿನಲ್ಲಿ ಶೇಕಡಾ 13 ರಷ್ಟು ಪಾಲುದಾರಿಕೆ ಹೊಂದಿದ್ದ ಇದು ಈಗ ಶೇಕಡಾ 16ರಷ್ಟು ಪಾಲುದಾರಿಕೆ ಹೊಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...