alex Certify
ಕನ್ನಡ ದುನಿಯಾ       Mobile App
       

Kannada Duniya

ಏ.1ರಿಂದ ಬದಲಾಗಲಿದೆ ಎಸ್ ಬಿ ಐ ನ ಈ ನಿಯಮ

ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಎಸ್ ಬಿ ಐ ಏಪ್ರಿಲ್ 1ರಿಂದ ಎರಡು ಬಹುದೊಡ್ಡ ಬದಲಾವಣೆ ಮಾಡ್ತಿದೆ.ಇದು 25 ಕೋಟಿ ಗ್ರಾಹಕರ ಮೇಲೆ ಪ್ರಭಾವ ಬೀರಲಿದೆ. ಚೆಕ್ ಬುಕ್ ಹಾಗೂ ಬ್ಯಾಲೆನ್ಸ್ ನಿಯಮದಲ್ಲಿ ಬದಲಾವಣೆಯಾಗ್ತಿದೆ.

ಎಸ್ ಬಿ ಐ ಉಳಿತಾಯ ಖಾತೆ ಮಾಸಿಕ ಸರಾಸರಿ ಬ್ಯಾಲೆನ್ಸ್ ದಂಡ ಪ್ರಮಾಣದಲ್ಲಿ ಬದಲಾವಣೆ ಮಾಡಿದೆ. ದಂಡ ಪ್ರಮಾಣದಲ್ಲಿ ಶೇಕಡಾ 75ರಷ್ಟು ಇಳಿಕೆಯಾಗಿದೆ. ಇನ್ಮುಂದೆ 15 ರೂಪಾಯಿ ಜಿಎಸ್ಟಿ ಜೊತೆ ದಂಡ ನೀಡಬೇಕಾಗುತ್ತದೆ. ಅಂದ್ರೆ 15 ರೂಪಾಯಿಗಿಂತ ಹೆಚ್ಚು ದಂಡ ವಿಧಿಸಬೇಕಿಲ್ಲ. ಈ ಹಿಂದೆ 50 ರೂಪಾಯಿ ಜೊತೆ ಜಿಎಸ್ಟಿ ಸೇರಿಸಿ ದಂಡ ನೀಡಬೇಕಿತ್ತು. ಎಸ್ ಬಿ ಐ ಈ ಯೋಜನೆಯಿಂದ 25 ಕೋಟಿ ಗ್ರಾಹಕರಿಗೆ ಲಾಭವಾಗಲಿದೆ.

ನಗರ ಪ್ರದೇಶದಲ್ಲಿ ಗ್ರಾಹಕರು 15 ರೂಪಾಯಿ ದಂಡ ನೀಡಬೇಕು. ಗ್ರಾಮೀಣ ಪ್ರದೇಶದ ಗ್ರಾಹಕರು 40 ರೂಪಾಯಿ ಪ್ಲಸ್ ಜಿಎಸ್ಟಿ ಬದಲು 12 ರೂಪಾಯಿ ಪ್ಲಸ್ 10 ರೂಪಾಯಿ ಜಿಎಸ್ಟಿ ದಂಡ ನೀಡಬೇಕು.

ಎಸ್ ಬಿ ಐ ಚೆಕ್ ಬುಕ್ ನಲ್ಲಿ ಬದಲಾವಣೆ ಮಾಡಿದೆ. ಎಸ್ ಬಿಐನಲ್ಲಿ ವಿಲೀನವಾಗಿರುವ ಬ್ಯಾಂಕ್ ಗಳ ಹಳೆ ಚೆಕ್ ಬುಕ್ ಗಳು ಏಪ್ರಿಲ್ 1ರಿಂದ ರದ್ದಾಗಲಿವೆ. ಹೊಸ ಚೆಕ್ ಬುಕ್ ಗೆ ಅರ್ಜಿ ಸಲ್ಲಿಸುವಂತೆ ಈ ಹಿಂದೆಯೇ ಬ್ಯಾಂಕ್ ಸೂಚನೆ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...