alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ ಲೈನ್ ವಂಚನೆ ಕುರಿತಂತೆ ಎಸ್.ಬಿ.ಐ. ನೀಡಿದೆ ಈ ‘ಮಹತ್ವ’ದ ಸೂಚನೆ

ತಂತ್ರಜ್ಞಾನ ಬೆಳೆದ ಹಾಗೆಲ್ಲಾ ಅದರಿಂದ ಉಪಯೋಗಗಳು ಹೆಚ್ಚಾಗ್ತಿವೆ. ಅದೇ ರೀತಿ ತಂತ್ರಜ್ಞಾನನ್ನ ಕುಟಿಲ ಕಾರ್ಯಗಳಿಗೆ ಬಳಸಿಕೊಳ್ತಿರೋರ ಸಂಖ್ಯೆಯೂ ಹೆಚ್ಚಿದೆ. ಅದರಲ್ಲೂ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಕಷ್ಟು ಮೋಸದ ದಂಧೆಗಳು ಆನ್ ಲೈನ್ ಮೂಲಕವೇ ನಡೆಯುತ್ತವೆ.

ಡಿಜಿಟಲ್ ಪೇಮೆಂಟ್ ಮತ್ತು ಆನ್ ಲೈನ್ ಪೇಮೆಂಟ್ ನ ಸಂದರ್ಭಗಳಲ್ಲಿ ಹೆಚ್ಚು ಜನರು ಮೋಸ ಹೋಗ್ತಿದ್ದಾರೆ. ಇದರಿಂದ ತನ್ನ ಗ್ರಾಹಕರಿಗೆ ಹುಷಾರಾಗಿರಿ ಅಂತ ಹೇಳುವುದರ ಜೊತೆಗೆ ಕೆಲವು ಸುರಕ್ಷಾ ಸೂತ್ರಗಳನ್ನ ಪಾಲಿಸಿ ಅಂತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಲಹೆ ನೀಡುತ್ತಿದೆ.

ವೈಯಕ್ತಿಕ ಮಾಹಿತಿಯನ್ನ ಭರ್ತಿ ಮಾಡಿ ಅಂತ ಬರುವ ಇ- ಮೇಲ್ ಗಳ ಬಗ್ಗೆ ಹೆಚ್ಚು ಜಾಗೃತರಾಗಿರಿ ಅಂತ ಎಸ್.ಬಿ.ಐ. ಮೊದಲ ಸೂಚನೆ ಕೊಡ್ತಿದೆ. ಪುಷ್ ಮೇಲ್ ಗಳಾಗಿರೋ ಇವುಗಳನ್ನ ಕ್ಲಿಕ್ ಮಾಡದೆ ಡಿಲೀಟ್ ಮಾಡಿಬಿಡಿ ಅಂತಿದೆ ಎಸ್.ಬಿ.ಐ. ಯಾಕಂದ್ರೆ ಇಂತಾ ಇ- ಮೇಲ್ ಗಳ ಒಂದು ಕ್ಲಿಕ್ ಗ್ರಾಹಕರನ್ನ ಫೇಕ್ ವೆಬ್ ಸೈಟ್ ಗೆ ಕರೆದುಕೊಂಡು ಹೋಗ್ತವಂತೆ. ಹಾಗಾಗಿ ಇಂತಾ ಇ- ಮೇಲ್ ಗಳ ಮೇಲೆ ಕ್ಲಿಕ್ ಮಾಡದೆ ಬ್ಯಾಂಕ್ ಗೆ ಮಾಹಿತಿ ನೀಡಿ.

ಎರಡನೆಯದಾಗಿ ನಿಮ್ಮ ಪಿಸಿ, ಲ್ಯಾಪ್ಟಾಪ್ ಅಥವಾ ಮೊಬೈಲ್ ಗಳಲ್ಲಿ ಕಂಡುಬರುವ ಪಾಪ್ ಅಪ್ ವಿಂಡೋಗಳ ಬಗ್ಗೆಯೂ ಹುಷಾರಾಗಿರಿ ಅಂತಿದೆ ಎಸ್.ಬಿ.ಐ. ಜಾಹೀರಾತುಗಳ ಪಾಪ್ ಅಪ್ ವಿಂಡೋಗಳು ನಿಮ್ಮ ಹಣಕಾಸು ವಹಿವಾಟಿಗೆ ಸಂಬಂಧಿಸಿದ ಮಾಹಿತಿಯನ್ನು ಕದಿಯುವ ಸಂಭವವೇ ಹೆಚ್ಚಂತೆ.

ಮೂರನೆಯದಾಗಿ ಇತ್ತೀಚಿನ ದಿನಗಳಲ್ಲಿ ವಿಶೇಷ ಬಹುಮಾನವನ್ನು ನೀಡುವ, ಲಾಟರಿ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತೇವೆ ಅಂತ ಇ- ಮೇಲ್ ಗಳು ಬರುತ್ತಿದ್ದರೆ ಅದು ಕಳ್ಳರ ತಂತ್ರ ಅನ್ನೋದು ನಿಮ್ಮ ಗಮನಕ್ಕಿರಲಿ. ಇಂತಾ ಹುಸಿ ಭರವಸೆಗಳನ್ನ ನಂಬುವ ಸಾಹಸ ಮಾಡಬೇಡಿ. ಅದರಲ್ಲೂ ನಿಮ್ಮ ಬ್ಯಾಂಕ್ ಅಕೌಂಟ್ ಡೀಟೈಲ್ಸ್, ಕ್ರೆಡಿಟ್, ಡೆಬಿಟ್ ಕಾರ್ಡ್ ಮಾಹಿತಿ ಸೇರಿದಂತೆ ಇತರೆ ಮಾಹಿತಿಯನ್ನು ಹಂಚಿಕೊಳ್ಳಬೇಡಿ.

ಕೊನೆಯದಾಗಿ ಮೊಬೈಲ್ ಗಳಿಗೆ ಬರುವ ಕೆಲ ಸಂದೇಶಗಳು ಕೂಡ ಆನ್ ಲೈನ್ ಲ್ಲಿ ಮೋಸಗಾರರು ಹಾಕಿರುವ ಗಾಳ ಅನ್ನೋ ವಿಚಾರ ಅನ್ನೋದು ನಿಮಗೆ ತಿಳಿದಿರಲಿ. ಸಂದೇಶವನ್ನ ಕಳಿಸಿ ನಿಮ್ಮ ಮೊಬೈಲ್ ಗೆ ವೈರಸ್ ಹರಡುವ ಮೂಲಕ ಮಾಹಿತಿಗೆ ಕನ್ನ ಹಾಕುವ ಮಾರ್ಗವನ್ನ ಆನ್ ಲೈನ್ ಚೋರರು ಅನುಸರಿಸುತ್ತಾರೆ. ಸೋ ಮೋಸ ಹೋದ್ವಿ ಅಂತ ಪರಿತಪಿಸುವ ಮೊದಲು ಮೋಸವಾಗದಂತೆ ಎಚ್ಚರ ವಹಿಸಿ ಅಂತ ತನ್ನ ಗ್ರಾಹಕರಿಗೆ ಎಸ್.ಬಿ.ಐ. ಸೂಚನೆ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...