alex Certify
ಕನ್ನಡ ದುನಿಯಾ       Mobile App
       

Kannada Duniya

SBI ಗ್ರಾಹಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಪ್ರತಿದಿನ ಎಟಿಎಂನಿಂದ 40,000 ರೂಪಾಯಿವರೆಗೆ ನಗದು ವಿತ್ ಡ್ರಾ ಮಾಡಲು ಅವಕಾಶ ಕಲ್ಪಿಸಿದೆ. ಎಸ್ ಬಿ ಐ ನ ಕ್ಲಾಸಿಕ್ ಡೆಬಿಟ್ ಕಾರ್ಡ್ ಬಳಸಿ ಗ್ರಾಹಕರು ಹಣ ವಿತ್ ಡ್ರಾ ಮಾಡಬಹುದು.

ಕ್ಲಾಸಿಕ್ ಡೆಬಿಟ್ ಕಾರ್ಡ್ ಹೊಂದಿರುವವರಿಗೆ ಎಸ್ ಬಿ ಐ ವಾರ್ಷಿಕ 125 ರೂ. + ಜಿಎಸ್ಟಿ ನಿರ್ವಹಣಾ ಶುಲ್ಕ ವಿಧಿಸುತ್ತದೆ. ಈ ಕಾರ್ಡನ್ನು ಬದಲಾಯಿಸಲು ನೀವು 300 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಕಾಲಕಾಲಕ್ಕೆ ಈ ದರಗಳಲ್ಲೂ ಬದಲಾವಣೆ ಆಗಲಿದೆ.

ನಗದು ವಿತ್ ಡ್ರಾವಲ್, ಫಾಸ್ಟ್ ಕ್ಯಾಶ್, ಬ್ಯಾಲೆನ್ಸ್ ಎನ್ ಕ್ವೈರಿ, ಪಿನ್ ಚೇಂಜ್, ಮಿನಿ ಸ್ಟೇಟ್ಮೆಂಟ್, ಚೆಕ್ ಬುಕ್ ರಿಕ್ವೆಸ್ಟ್ ಮತ್ತು ಯುಟಿಲಿಟಿ ಬಿಲ್ ಪೇಮೆಂಟ್ ಸೇರಿದಂತೆ ಎಟಿಎಂಗಳಲ್ಲಿ ಗ್ರಾಹಕರಿಗೆ ಹಲವು ಆಪ್ಷನ್ ಗಳನ್ನು ಸಹ ಎಸ್ ಬಿ ಐ ನೀಡಿದೆ.

ಎಸ್ ಬಿ ಐ ಎಟಿಎಂಗಳಲ್ಲಿ ಗ್ರಾಹಕರು ಇಂಟರ್ ಮೊಬೈಲ್ ಪೇಮೆಂಟ್ ಸಿಸ್ಟಮ್ ಸೇವೆಯನ್ನು ಸಹ ಪಡೆಯಬಹುದು. ನೋಂದಾಯಿತ IMPS ಸಂಖ್ಯೆ ಇದ್ದಲ್ಲಿ, ಯಾರಿಗೆ ಬೇಕಾದರೂ ಹಣ ಟ್ರಾನ್ಸ್ ಫರ್ ಮಾಡಲು ಅವಕಾಶವಿರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...