alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಡೆಬಿಟ್ ಕಾರ್ಡನ್ನು ಯಾರಿಗಾದ್ರು ಕೊಟ್ಟೀರಾ ಜೋಕೆ!!

ನೀವು ನಿಮ್ಮ ಡೆಬಿಟ್ ಕಾರ್ಡನ್ನು ಯಾರ ಬಳಿಯಾದರೂ ಕೊಟ್ಟು ಎಟಿಎಂನಿಂದ ಹಣ ತರಲು ಕಳುಹಿಸುತ್ತೀರಾ ಎಂದರೆ ಇನ್ನು ಮುಂದೆ ಜಾಗೃತರಾಗುವುದು ಒಳಿತು. ಅದಕ್ಕೇನು ಕಾರಣ ಅಂತೀರಾ ಈ ಸ್ಟೋರಿ ಓದಿ.

ಬೆಂಗಳೂರಿನ ಮಾರತ್ ಹಳ್ಳಿಯ ನಿವಾಸಿ ವಂದನಾ, ಪತಿ ರಾಜೇಶ್ ಅವರ ಬಳಿ ತಮ್ಮ ಎಟಿಎಂ ಕಾರ್ಡನ್ನು ಕೊಟ್ಟು ಹಣ ತರಲು ಕಳುಹಿಸಿದ್ದರು. ಆದರೆ ಬ್ಯಾಂಕ್ ಎಟಿಎಂನಲ್ಲಿ ಹಣ ತೆಗೆಯುವಾಗ ಎಟಿಎಂ ನಿಂದ ಹಣ ಹೊರಬಂದಿಲ್ಲ. ಆದರೆ ಎಟಿಎಂ ಯಂತ್ರವು ಎಟಿಎಂನಿಂದ ಹಣ ಹೊರ ಬಂದಂತೆ ಚೀಟಿಯಲ್ಲಿ ತೋರಿಸಿದೆ.

ಇದನ್ನು ಪ್ರಶ್ನಿಸಿ ರಾಜೇಶ್ ದಂಪತಿಗಳು ಬ್ಯಾಂಕ್ ಅನ್ನು ಸಂಪರ್ಕಿಸಿದ್ದಾರೆ. ಅದಕ್ಕೆ ಬ್ಯಾಂಕಿನವರು ಎಟಿಎಂ ಕಾರ್ಡು ಹೊಂದಿದವರು ಮಾತ್ರ ಹಣವನ್ನು ತೆಗೆಯಬೇಕು. ಆದ್ದರಿಂದ ಬೇರೆಯವರು ಹಣ ತೆಗೆದರೆ ಆಗುವ ಪ್ರಮಾದಕ್ಕೆ ಬ್ಯಾಂಕ್ ಜವಾಬ್ದಾರರಲ್ಲ ಎಂದು ಉತ್ತರಿಸಿದ್ದರು.

ಇದನ್ನು ಪ್ರಶ್ನಿಸಿ ದಂಪತಿಗಳು ಗ್ರಾಹಕ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಗ್ರಾಹಕ ನ್ಯಾಯಾಲಯವು ಈಗ  ಅರ್ಜಿಯನ್ನು ವಿಲೇವಾರಿಗೊಳಿಸಿದ್ದು, ತನ್ನ ತೀರ್ಪಿನಲ್ಲಿ ಇನ್ನೊಬ್ಬರಿಗೆ ಎಟಿಎಂ ಕಾರ್ಡ್ ಕೊಡುವುದು ಸರಿಯಾದ ಕ್ರಮವಲ್ಲವೆಂದು ತೀರ್ಮಾನಿಸಿ ಅರ್ಜಿಯನ್ನು ವಜಾಗೊಳಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...