alex Certify
ಕನ್ನಡ ದುನಿಯಾ       Mobile App
       

Kannada Duniya

ಬದಲಾಗಿದೆ ಉಳಿತಾಯ ಖಾತೆಯ ಈ ನಿಯಮ

ದೇಶದ ದೊಡ್ಡ ಸರ್ಕಾರಿ ಬ್ಯಾಂಕ್ ಎಸ್ ಬಿ ಐ ನಲ್ಲಿ ಉಳಿತಾಯ ಖಾತೆ ಹೊಂದಿರುವವರು ಈ ಸುದ್ದಿ ಓದಲೇಬೇಕು. ಯಾಕೆಂದ್ರೆ ಬ್ಯಾಂಕ್ ನ ಉಳಿತಾಯ ಖಾತೆ ನಿಯಮದಲ್ಲಿ ಕೆಲವಷ್ಟು ಬದಲಾವಣೆಗಳಾಗ್ತಿವೆ. ಅಕ್ಟೋಬರ್ 1ರಿಂದ ನಿಯಮಗಳು ಬದಲಾಗ್ತಿವೆ. ಎಸ್ ಬಿ ಐ ಸಹವರ್ತಿ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರೆ ನಿಮ್ಮ ಚೆಕ್ ಮಾನ್ಯವಾಗುವುದಿಲ್ಲ.

ಎಸ್ ಬಿ ಐ ಉಳಿತಾಯ ಖಾತೆ ಕನಿಷ್ಠ ಶುಲ್ಕವನ್ನು ಕಡಿತಗೊಳಿಸಿದೆ. ಈ ಬ್ಯಾಂಕ್ ನ ಕನಿಷ್ಠ ಮಿತಿ 5 ಸಾವಿರದಿಂದ 3 ಸಾವಿರಕ್ಕೆ ಇಳಿಸಲಾಗಿದೆ. ಇದು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ಎಸ್ ಬಿ ಐ ನಲ್ಲಿ ನಿಮ್ಮ ಅಕೌಂಟ್ ಇದ್ದು ಅದನ್ನು ರದ್ದುಪಡಿಸಲು ನಿರ್ಧರಿಸಿದ್ದರೆ ಇದಕ್ಕೆ ನೀವು ಚಾರ್ಜ್ ನೀಡಬೇಕಾಗಿಲ್ಲ.

ಇದು ಖಾತೆ ತೆರೆದ 14 ದಿನಗಳವರೆಗೆ ಹಾಗೂ ಒಂದು ವರ್ಷದ ನಂತ್ರ ಖಾತೆ ಬಂದ್ ಮಾಡಿದ್ರೆ ಈ ಸೌಲಭ್ಯ ಸಿಗಲಿದೆ. 14 ದಿನಗಳ ನಂತ್ರ ಹಾಗೂ ಒಂದು ವರ್ಷಕ್ಕಿಂತ ಮೊದಲೇ ಖಾತೆ ಬಂದ್ ಮಾಡಲು ಬಯಸಿದ್ರೆ 500 ರೂಪಾಯಿ ಹಾಗೂ ಜಿಎಸ್ಟಿ ನೀಡಬೇಕಾಗುತ್ತದೆ.

ಹಾಗೆ ಎಸ್ ಬಿ ಐ ನಲ್ಲಿ ವಿಲೀನವಾಗಿರುವ ಬ್ಯಾಂಕ್ ಗಳ ಚೆಕ್ ಕೂಡ ಅಕ್ಟೋಬರ್ 1ರಿಂದ ನಡೆಯುವುದಿಲ್ಲ. ಎಸ್ ಬಿ ಐ ನಲ್ಲಿ ಅರ್ಜಿ ಸಲ್ಲಿಸಿ ಹೊಸ ಚೆಕ್ ಪಡೆಯಬೇಕಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...