alex Certify
ಕನ್ನಡ ದುನಿಯಾ       Mobile App
       

Kannada Duniya

ಎಸ್.ಬಿ.ಐ. ಗ್ರಾಹಕರಿಗೆ ಶಾಕಿಂಗ್ ನ್ಯೂಸ್, ಏನದು ಗೊತ್ತಾ…?

ಮುಂಬೈ: ದೇಶದ ಅತಿದೊಡ್ಡ ಸಾಲದಾತನಾಗಿರುವ ಭಾರತೀಯ ಸ್ಟೇಟ್ ಬ್ಯಾಂಕ್(SBI) 2017 ರ ಡಿಸೆಂಬರ್ ಅಂತ್ಯಕ್ಕೆ ಭಾರೀ ನಷ್ಟವನ್ನು ಅನುಭವಿಸಿದೆ. ಸಾಲ ಮೊದಲಾದ ಕಾರಣಗಳಿಂದ PSU ಸಾಲ 2416 ಕೋಟಿ ರೂ. ನಷ್ಟ ಅನುಭವಿಸಿದೆ.

ವಸೂಲಾಗದ ಸಾಲ ಮತ್ತು ಅದರ ನಿರ್ವಹಣೆಗಾಗಿ ಹೆಚ್ಚಿನ ಹಣ ಹಂಚಿಕೆಯಾದ ಕಾರಣ 1886 ಕೋಟಿ ರೂ. ನಿವ್ವಳ ನಷ್ಟವಾಗಿದೆ. ವಸೂಲಾಗದ ಸಾಲದ ಪ್ರವಾಣ ಶೇ. 4.24 ರಿಂದ ಶೇ. 5.16 ಕ್ಕೆ ಏರಿಕೆಯಾಗಿದೆ. ಬ್ಯಾಂಕ್ ನ 1,99,141 ಕೋಟಿ ರೂ. ಅನುತ್ಪಾದಕ ಆಸ್ತಿಯಾಗಿ ಪರಿವರ್ತನೆಯಾಗಿದೆ.

ನಿವ್ವಳ ಅನುತ್ಪಾದಕ ಆಸ್ತಿಯೂ ದ್ವಿಗುಣವಾಗಿ 61,430 ಕೋಟಿ ರೂ.ನಿಂದ 1,02,370 ಕೋಟಿ ರೂ.ಗೆ ಏರಿದೆ. ಇದರೊಂದಿಗೆ ಬ್ಯಾಂಕಿನ ಬಡ್ಡಿಯೇತರ ಆದಾಯ ಇಳಿಕೆಯಾಗಿ, 11,507 ಕೋಟಿ ರೂ.ನಿಂದ 8084 ಕೋಟಿ ರೂ.ಗೆ ಇಳಿದಿದೆ. ಈ ಮೂಲಕ ಎಸ್.ಬಿ.ಐ. ತ್ರೈಮಾಸಿಕದಲ್ಲಿ ಭಾರೀ ನಷ್ಟವನ್ನು ಅನುಭವಿಸಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...