alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಹಕರ ಕೆಲಸ ಇನ್ನಷ್ಟು ಸುಲಭ ಮಾಡಿದ ಎಸ್ ಬಿ ಐ

ದೇಶದ ಅತಿ ದೊಡ್ಡ ಬ್ಯಾಂಕ್ ಎಸ್ ಬಿ ಐ ನಲ್ಲಿ ನೀವು ಉಳಿತಾಯ ಖಾತೆ ಹೊಂದಿದ್ದರೆ ನಿಮಗೊಂದು ಖುಷಿ ಸುದ್ದಿ. ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಮತ್ತಷ್ಟು ಸುಲಭಗೊಳಿಸಿದೆ. ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಲ್ಲುವ ಬದಲು ಮನೆಯಲ್ಲಿಯೇ ಕುಳಿತು ಒಂದು ಎಸ್ ಎಂ ಎಸ್ ಮೂಲಕ ಖಾತೆಯಲ್ಲಿರುವ ಬ್ಯಾಲೆನ್ಸ್ ಚೆಕ್ ಮಾಡಬಹುದು. ಚೆಕ್ ಪಾವತಿ ಸಹ ತಡೆ ಹಿಡಿಯಬಹುದು.

ಎಸ್ ಬಿ ಐ ಅಧಿಕೃತ ಖಾತೆಯಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದೆ. ನೋಂದಾಯಿತ ಗ್ರಾಹಕರಿಗೆ ಎಸ್ ಎಂ ಎಸ್ ಸೇವೆ ಲಭ್ಯವಾಗಲಿದೆ. ಗ್ರಾಹಕರು ಎಸ್ ಬಿ ಐ ಯಾವುದೇ ಶಾಖೆಗೆ ಹೋಗಿ ನೋಂದಣಿ ಮಾಡಬಹುದಾಗಿದೆ. ಬ್ಯಾಂಕ್ ಅಕೌಂಟ್ ಜೊತೆ ನಿಮ್ಮ ಮೊಬೈಲ್ ನಂಬರ್ ನೀಡಿದ್ರೆ ಸಾಕು.

ಬ್ಯಾಂಕ್ ಬ್ಯಾಲೆನ್ಸ್ ಗೆ 09223766666 ನಂಬರ್ ಗೆ ಮಿಸ್ಡ್ ಕಾಲ್ ನೀಡಿದ್ರೆ ಸಾಕು. ಇಲ್ಲವೆ BAL ಎಂದು ಟೈಪ್ ಮಾಡಿ 09223766666  ನಂಬರ್ ಗೆ ಎಸ್ ಎಂ ಎಸ್ ಮಾಡಬಹುದು. ಕೆಲವೇ ಕ್ಷಣಗಳಲ್ಲಿ ನಿಮ್ಮ ಬ್ಯಾಲೆನ್ಸ್ ಹಣದ ವಿವರ ಸಿಗಲಿದೆ.

09223866666 ನಂಬರ್ ಗೆ ಮಿಸ್ಡ್ ಕಾಲ್ ನೀಡಿ ಅಥವಾ MSTMT ಎಂದು ಈ 09223866666  ನಂಬರ್ ಗೆ ಎಸ್ ಎಂಎಸ್ ಮಾಡಿದ್ರೆ ಎಟಿಎಂನಲ್ಲಿ ನೀವು ಮಾಡಿದ ಐದು ವಹಿವಾಟಿನ ವಿವರ ಸಿಗಲಿದೆ. ಎಟಿಎಂ ಕಾರ್ಡ್ ಲಾಕ್ ಮಾಡಲು BLOCK<space>XXXX’ to 567676 ಗೆ ಸಂದೇಶ ಕಳುಹಿಸಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...