alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಹಕರಿಗೆ ಮತ್ತೊಂದು ಖುಷಿ ಸುದ್ದಿ ನೀಡಿದ ಎಸ್.ಬಿ.ಐ.

ಬ್ಯಾಂಕ್ ಗ್ರಾಹಕರ ಕೆಲಸವನ್ನು ಸರಳಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಈಗ ಮತ್ತೊಂದು ಸೌಲಭ್ಯವನ್ನು ತನ್ನ ಗ್ರಾಹಕರಿಗೆ ಒದಗಿಸುವ ಮೂಲಕ ಮತ್ತಷ್ಟು ಸ್ನೇಹಮಹಿಯಾಗಿದೆ.

ಎಸ್.ಬಿ.ಐ. ಗ್ರಾಹಕರು ಆನ್ ಲೈನ್ ಮೂಲಕ ಯಾರಿಗಾದರೂ ಹಣ ಕಳುಹಿಸಬೇಕಾದಲ್ಲಿ ಈ ಹಿಂದಿನಂತೆ ಇನ್ನು ಮುಂದೆ ರಿಜಿಸ್ಟರ್ ಮಾಡಬೇಕಾಗಿಲ್ಲ. ಕ್ವಿಕ್ ಟ್ರಾನ್ಸ್ಫರ್ ಸೌಲಭ್ಯದಡಿ ಕೂಡಲೇ ಹಣ ಕಳುಹಿಸಬಹುದಾಗಿದೆ. ಎಸ್.ಬಿ.ಐ. ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯ ಹೊಂದಿದವರು ಪ್ರತಿ ವಹಿವಾಟಿಗೆ 10,000 ದಂತೆ ಒಟ್ಟು 25 ಸಾವಿರ ರೂಪಾಯಿಗಳನ್ನು ಈ ಮೂಲಕ ವರ್ಗಾಯಿಸಬಹುದಾಗಿದೆ.

ಹಣ ಪಡೆಯುವರು ಎಸ್.ಬಿ.ಐ. ಗ್ರಾಹಕರಾಗಿದ್ದರೆ ಕೂಡಲೇ ಅವರ ಖಾತೆಗೆ ಹಣ ಜಮೆಯಾಗಲಿದೆ. ಒಂದು ವೇಳೆ ಇತರೆ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿದ್ದರೆ ಐಎಂಪಿಎಸ್ ಅಥವಾ ನೆಫ್ಟ್ ಮುಖಾಂತರ ಹಣ ವರ್ಗಾವಣೆಯಾಗಲಿದೆ. ಈ ಹಿಂದೆ ಎಸ್.ಬಿ.ಐ. ಖಾತೆದಾರರು ಯಾರಿಗಾದರೂ ಹಣ ಕಳುಹಿಸಬೇಕಾದಲ್ಲಿ ಫಲಾನುಭವಿಗಳ ಹೆಸರು, ಬ್ಯಾಂಕ್ ಖಾತೆ ಸಂಖ್ಯೆ, ಐಎಫ್ಎಸ್ಸಿ ಕೋಡ್ ಜೊತೆಗೆ ಬ್ಯಾಂಕ್ ಬ್ರಾಂಚ್ ವಿವರದೊಂದಿಗೆ ರಿಜಿಸ್ಟರ್ ಮಾಡಬೇಕಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...