alex Certify
ಕನ್ನಡ ದುನಿಯಾ       Mobile App
       

Kannada Duniya

ದೇಶಭಕ್ತ ಬ್ರಾಂಡ್ ಪಟ್ಟಿಯಲ್ಲಿ ಎಸ್.ಬಿ.ಐ.ಗೆ ಮೊದಲ ಸ್ಥಾನ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಕುಟಕ್ಕೆ ಇನ್ನೊಂದು ಗರಿ ಮೂಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಅತ್ಯಂತ ಮೀಸಲಾದ ಮತ್ತು ದೇಶಭಕ್ತ ಬ್ರಾಂಡ್ ಎಂಬ ಪಟ್ಟ ಗಿಟ್ಟಿಸಿಕೊಂಡಿದೆ. ಸಮೀಕ್ಷೆ ಪ್ರಕಾರ, ಸ್ಟೇಟ್ ಬ್ಯಾಂಕ್ ಮೊದಲ ಸ್ಥಾನದಲ್ಲಿದ್ದು, ನಂತ್ರ ಟಾಟಾ ಮೋಟರ್ಸ್, ಪತಂಜಲಿ, ರಿಲಯನ್ಸ್ ಜಿಯೋ ಮತ್ತು ಬಿಎಸ್ಎನ್ಎಲ್ ಕಂಪನಿಗಳಿವೆ.

ಸರ್ವೆಯಲ್ಲಿ ಪಾಲ್ಗೊಂಡಿದ್ದ ಶೇಕಡಾ 16 ರಷ್ಟು ಮಂದಿ ಎಸ್.ಬಿ.ಐ. ಅತ್ಯಂತ ಪ್ರಮುಖ ದೇಶಭಕ್ತ ಬ್ರಾಂಡ್ ಎಂದಿದ್ದಾರೆ. ಟಾಟಾ ಮೋಟರ್ಸ್ ಹಾಗೂ ಪತಂಜಲಿಗೆ ಶೇಕಡಾ 8 ರಷ್ಟು ಮತ ಬಿದ್ದಿದೆ. ರಿಲಾಯನ್ಸ್ ಜಿಯೋ ಹಾಗೂ ಬಿಎಸ್ಎನ್ಎಲ್ ಗೆ ಶೇಕಡಾ 5 ರಷ್ಟು ಜನರು ಮತ ನೀಡಿದ್ದಾರೆ.

ಸರ್ವೆಯಲ್ಲಿ ಹಣಕಾಸು ಕ್ಷೇತ್ರ ಮುಂಚೂಣಿಯಲ್ಲಿದೆ. ಎಸ್.ಬಿ.ಐ. ಮತ್ತು ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಗೆ ಹೆಚ್ಚಿನ ಮತ ಬಿದ್ದಿದೆ. ಇದಾದ ನಂತ್ರ ವಾಹನಗಳು, ಬಾಳಿಕೆ ಬರುವ ಗ್ರಾಹಕ ಸರಕುಗಳು, ಆಹಾರ ಮತ್ತು ದೂರಸಂಪರ್ಕ ವಲಯಗಳಿವೆ. ಸರ್ವೆಯಲ್ಲಿ 11 ವಿಭಾಗದ 152 ಬ್ರಾಂಡ್ ಗಳನ್ನು ಸೇರಿಸಲಾಗಿತ್ತು. ಆಗಸ್ಟ್ 2ರಿಂದ ಆಗಸ್ಟ್ 8 ರವರೆಗೆ ನಡೆದ ಸರ್ವೆಯಲ್ಲಿ 1,193 ಜನರ ಅಭಿಪ್ರಾಯ ಸಂಗ್ರಹಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...