alex Certify
ಕನ್ನಡ ದುನಿಯಾ       Mobile App
       

Kannada Duniya

ಎಸ್ ಬಿ ಐ ಎಟಿಎಂ ಕಾರ್ಡ್ ಬಳಕೆದಾರರಿಗೆ ಗುಡ್ ನ್ಯೂಸ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಕೋಟ್ಯಾಂತರ ಎಟಿಎಂ ಕಾರ್ಡ್ ದಾರರಿಗೆ ಅನನ್ಯ ಸೇವೆಯನ್ನು ಶುರು ಮಾಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಆ್ಯಪ್ ಸೇವೆ ಶುರು ಮಾಡಿದೆ. ಈ ಆ್ಯಪ್ ಮೂಲಕ ಗ್ರಾಹಕರು ಎಟಿಎಂ ಕಾರ್ಡನ್ನು ಕಂಟ್ರೋಲ್ ಮಾಡಬಹುದಾಗಿದೆ.

ಒಂದು ವೇಳೆ ಕಾರ್ಡ್ ಕಳೆದು ಹೋದ್ರೆ ಗ್ರಾಹಕರು ಆ್ಯಪ್ ಮೂಲಕ ಕಾರ್ಡನ್ನು ಬ್ಲಾಕ್ ಮಾಡಬಹುದಾಗಿದೆ. ಎಸ್ ಬಿ ಐ ಈ ಅಪ್ಲಿಕೇಷನ್ ಗೆ ಕ್ಲಿಕ್ ಎಂದು ಹೆಸರಿಟ್ಟಿದೆ. ಈ ಆ್ಯಪ್ ಆಂಡ್ರಾಯ್ಡ್ ಮತ್ತು ಐಒಎಸ್ ಆವೃತ್ತಿಗಳಲ್ಲಿ ಸಿಗಲಿದೆ. ಎಸ್ ಬಿ ಐನ ಯಾವುದೇ ಗ್ರಾಹಕ ಈ ಅಪ್ಲಿಕೇಷನ್ ಮೂಲಕ ಕಾರ್ಡನ್ನು ಕಂಟ್ರೋಲ್ ಮಾಡಬಹುದಾಗಿದೆ.

ಈ ಬಗ್ಗೆ ಟ್ವೀಟರ್ ಅಕೌಂಟ್ ನಲ್ಲಿ ಎಸ್ ಬಿ ಐ ಮಾಹಿತಿ ನೀಡಿದೆ. ಎಸ್ ಬಿ ಐ ನ ಬೇರೆ ಆ್ಯಪ್ಸ್ ನಂತೆಯೇ ಈ ಆ್ಯಪ್ ನಲ್ಲೂ ಅನೇಕ ವಿಶೇಷತೆಗಳಿವೆ. ಜೊತೆಗೆ ಎಟಿಎಂ ಕಾರ್ಡ್ ಗೆ ಸಂಬಂಧಿಸಿದಂತೆ ವಿಭಿನ್ನ ಸೌಲಭ್ಯಗಳನ್ನು ನೀಡಲಾಗಿದೆ. ಆ್ಯಪ್ ನಲ್ಲಿ ಎಟಿಎಂ ಬ್ಲಾಕಿಂಗ್ ಕ್ಲಿಕ್ ಮಾಡಬೇಕು. ನಂತ್ರ ಎಟಿಎಂನ ಕೊನೆಯ ನಾಲ್ಕು ನಂಬರ್ ಗಳನ್ನು ಅದ್ರಲ್ಲಿ ನಮೂದಿಸಬೇಕಾಗುತ್ತದೆ. ಈ ಸೇವೆಗಾಗಿ ನೀವು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಎಸ್ಎಂಎಸ್ ಮೂಲಕ ಎಟಿಎಂ ಕಾರ್ಡ್ ಬ್ಲಾಕ್ ಮಾಡಬೇಕಾದ್ರೆ BLOCK-space ಜೊತೆಗೆ ಕಾರ್ಡ್ ನ ಕೊನೆಯ 4 ನಂಬರ್ ಟೈಪ್ ಮಾಡಿ 567676 ನಂಬರ್ ಗೆ ಎಸ್ಎಂಎಸ್ ಮಾಡಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...