alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಹಕರಿಗೆ ಅನುಕೂಲಕರವಾಗಿದೆ ಎಸ್‌ಬಿಐ ಇನ್‌ಸ್ಟಂಟ್ ಮನಿ ಟ್ರಾನ್ಸ್‌ಫರ್

ನಿಮ್ಮ ಮನೆಯವರಿಗೋ, ಸ್ನೇಹಿತರಿಗೋ ತ್ವರಿತವಾಗಿ ಹಣ ಕಳುಹಿಸಬೇಕೆಂದಿದ್ದರೆ, ಎಸ್‌ಬಿಐ ಇನ್‌ಸ್ಟಂಟ್ ಸಲ್ಯೂಶನ್ ಹೊಂದಿದೆ. 22,500 ಶಾಖೆಗಳು ಹಾಗೂ 59,000 ಎಟಿಎಂಗಳು ಇನ್‌ಸ್ಟಂಟ್ ಮನಿ ಟ್ರಾನ್ಸ್‌ಫರ್ (ಐಎಂಟಿ) ಸೌಲಭ್ಯವನ್ನು ನೀಡುತ್ತಿವೆ.

ಇಲ್ಲಿವೆ ಎಸ್‌ಬಿಐ ಸೇವೆಯ ಪ್ರಮುಖ ಅಂಶಗಳು:
ಮೊದಲು ನೀವು ಎಸ್‌ಬಿಐ ಸಿಸ್ಟಂನಲ್ಲಿ ಫಲಾನುಭವಿ (ಬೆನಿಫಿಶರಿ)ಯನ್ನು ನೋಂದಾಯಿಸಬೇಕು. ಫಲಾನುಭವಿಯು ಪೂರ್ತಿ ಮೊತ್ತವನ್ನು ಒಂದೇ ವಹಿವಾಟಲ್ಲಿ ವಿತ್‌ಡ್ರಾ ಮಾಡಬೇಕು. ಭಾಗಶಃ ವಿತ್‌ಡ್ರಾಕ್ಕೆ ಅವಕಾಶವಿರುವುದಿಲ್ಲ.

ಎಟಿಎಂಗಳನ್ನು ಉಪಯೋಗಿಸಿಕೊಂಡು ಎಸ್‌ಬಿಐ ಐಎಂಟಿ ಮಾಡುವ ಗ್ರಾಹಕರು ಫಲಾನುಭವಿಯ ಹೆಸರು ಹಾಗೂ ವಿಳಾಸವನ್ನು ಎಸ್ಎಂಎಸ್ (567676ಕ್ಕೆ) ಮೂಲಕ ಒದಗಿಸಬೇಕು. ಎಸ್ಎಂಎಸ್ ಈ ರೀತಿ ಕಳುಹಿಸಬೇಕು: BREG 9912345678+BENEFICIARY NAME+PLACE+400706, ಅಂದರೆ, ಬೆನಿಫಿಶರಿಯ ಮೊಬೈಲ್ ಸಂ, ಬೆನಿಫಿಶರಿಯ ಹೆಸರು, ಬೆನಿಫಿಶರಿಯ ಸ್ಥಳ ಹಾಗೂ ಸ್ಥಳದ ಪಿನ್ ಕೋಡ್. ಐಎಂಟಿ ಮೂಲಕ ಒಂದು ಬಾರಿಗೆ ಕನಿಷ್ಠ 100 ರೂ. ಹಾಗೂ ಗರಿಷ್ಠ 10,000 ರೂ. ವಹಿವಾಟು ನಡೆಸಬಹುದು.

ಪ್ರತಿ ಫಲಾನುಭವಿಗೆ ಮಾಸಿಕ ಮಿತಿ 25,000 ರೂ. ಆಗಿದೆ. ಒಬ್ಬ ವ್ಯಕ್ತಿ ತಿಂಗಳಿಗೆ ಗರಿಷ್ಠ 50,000 ರೂ. ಕಳುಹಿಸಬಹುದು, ಗರಿಷ್ಠ 10 ಫಲಾನುಭವಿಗಳಿಗೆ ಕಳುಹಿಸಬಹುದು. ಪ್ರತಿ ವಹಿವಾಟಿಗೆ ಹಣ ರವಾನಿಸುವ ವ್ಯಕ್ತಿಗೆ 25 ರೂ. ಶುಲ್ಕ ವಿಧಿಸಲಾಗುತ್ತದೆ. ಫಲಾನುಭವಿಗೆ ಯಾವುದೇ ಶುಲ್ಕವಿರುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...