alex Certify
ಕನ್ನಡ ದುನಿಯಾ       Mobile App
       

Kannada Duniya

ಎಸ್.ಬಿ.ಐ. ಗ್ರಾಹಕರಿಗೆ ಖುಷಿ ಸುದ್ದಿ: ಏರಿಕೆಯಾಗಿದೆ ಸ್ಥಿರ ಠೇವಣಿ ಬಡ್ಡಿ ದರ

ದೇಶದ ಅತಿ ದೊಡ್ಡ ಬ್ಯಾಂಕ್ ಎಸ್.ಬಿ.ಐ. ಸೋಮವಾರ ನಿಗದಿತ ಅವಧಿಯ ಸ್ಥಿರ ಠೇವಣಿ (ಫಿಕ್ಸಡ್ ಡೆಪಾಸಿಟ್) ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡಿದೆ. ಬಡ್ಡಿ ದರವನ್ನು 5 ರಿಂದ 10 ಪೇಸ್ ಪಾಯಿಂಟ್ ಗೆ ಹೆಚ್ಚಿಸಲಾಗಿದೆ. ಅಂದ್ರೆ ಶೇಕಡಾ 0.05 ರಿಂದ 0.1 ಕ್ಕೆ ಹೆಚ್ಚಳವಾಗಿದೆ. ಹೊಸ ದರ ಜುಲೈ 30 ಅಂದ್ರೆ ಇಂದಿನಿಂದಲೇ ಜಾರಿಗೆ ಬರಲಿದೆ. ಬಡ್ಡಿದರ ಏರಿಕೆ ಎಸ್.ಬಿ.ಐ. ಗ್ರಾಹಕರಿಗೆ ಲಾಭಕರವಾಗಿರಲಿದೆ.

ಎಸ್.ಬಿ.ಐ. ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಒಂದರಿಂದ ಎರಡು ವರ್ಷದ ಎಫ್.ಡಿ. ಗೆ ಇನ್ಮುಂದೆ ಶೇಕಡಾ 6.70 ರಷ್ಟು ಬಡ್ಡಿ ನೀಡಲಿದೆ. ಈ ಹಿಂದೆ ಈ ದರ ಶೇಕಡಾ 6.65 ಇತ್ತು. ಎರಡರಿಂದ ಮೂರು ವರ್ಷದ ಎಫ್.ಡಿ. ಗೆ ಶೇಕಡಾ 6.65 ರ ಬದಲು ಶೇಕಡಾ 6.75ರಷ್ಟು ಬಡ್ಡಿ ಸಿಗಲಿದೆ.

ಹಿರಿಯ ನಾಗರಿಕರಿಗೆ ಒಂದು ವರ್ಷದಿಂದ ಎರಡು ವರ್ಷದ ಎಫ್.ಡಿ.ಗೆ ಶೇಕಡಾ 7.15ರ ಬದಲು ಶೇಕಡಾ 7.20ರಷ್ಟು ಬಡ್ಡಿ ಸಿಗಲಿದೆ. ಎರಡರಿಂದ ಮೂರು ವರ್ಷದ ಎಫ್.ಡಿ.ಗೆ ಶೇಕಡಾ 7.15ರ ಬದಲು ಶೇಕಡಾ 7.25ರಷ್ಟು ಬಡ್ಡಿ ಸಿಗಲಿದೆ.

ಇನ್ನು ಒಂದರಿಂದ 2 ವರ್ಷದ 1 ಕೋಟಿಗಿಂತ ಹೆಚ್ಚು ಸ್ಥಿರ ಠೇವಣಿಯ ಬಡ್ಡಿದರವನ್ನು ಶೇಕಡಾ 7ರಿಂದ ಶೇಕಡಾ 6.70ಕ್ಕೆ ಇಳಿಸಲಾಗಿದೆ. ಎಸ್.ಬಿ.ಐ. ಹಿಂದಿನ ಮಾರ್ಚ್ 28ರಂದು ಬಡ್ಡಿ ದರದಲ್ಲಿ ಬದಲಾವಣೆ ಮಾಡಿತ್ತು. ಎಸ್.ಬಿ.ಐ. ಬಡ್ಡಿ ದರದಲ್ಲಿ ಏರಿಕೆಯಾಗ್ತಿದ್ದಂತೆ ಷೇರು ಖರೀದಿ ಹೆಚ್ಚಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...