alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಥಿರ ಠೇವಣಿ ಬಡ್ಡಿ ಏರಿಕೆ ಮಾಡಿ ಗ್ರಾಹಕರಿಗೆ SBI ಗಿಫ್ಟ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೋಳಿಗೂ ಮುನ್ನವೇ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದೆ. ದೇಶದ ಅತ್ಯಂತ ದೊಡ್ಡ ಬ್ಯಾಂಕ್ ಸ್ಥಿರ ಠೇವಣಿ ಮೇಲೆ ನೀಡುವ ಬಡ್ಡಿಯನ್ನು ಶೇಕಡಾ 0.50ರಷ್ಟು ಏರಿಕೆ ಮಾಡಿದೆ. ಎಸ್ ಬಿ ಐ 1 ಕೋಟಿಗಿಂತ ಕಡಿಮೆ ಸ್ಥಿರ ಠೇವಣಿಯಿಟ್ಟ ಗ್ರಾಹಕರಿಂದ ಹಿಡಿದು 10 ಕೋಟಿ ರೂಪಾಯಿವರೆಗೆ ಸ್ಥಿರ ಠೇವಣಿಯಿಟ್ಟ ಎಲ್ಲರಿಗೂ ಸಿಗುವ ಬಡ್ಡಿಯಲ್ಲಿ ಏರಿಕೆ ಮಾಡಲಾಗಿದೆ.

ಹಿರಿಯ ನಾಗರಿಕರಿಗೆ ಸಿಗುವ ಬಡ್ಡಿ ದರವನ್ನೂ ಎಸ್ ಬಿ ಐ ಏರಿಕೆ ಮಾಡಿದೆ. ಹಿರಿಯ ನಾಗರಿಕರಿಗೆ 7-45 ದಿನಗಳ ಠೇವಣಿ ಮೇಲೆ ಶೇಕಡಾ 5.25ರ ಬದಲು ಶೇಕಡಾ 5.75ರಷ್ಟು ಬಡ್ಡಿ ನೀಡಲಿದೆ. 180-210 ದಿನಗಳ ಠೇವಣಿಗೆ ಶೇಕಡಾ 6.75ರ ಬದಲು ಶೇಕಡಾ 6.85ಕ್ಕೆ ಬಡ್ಡಿ ದರವನ್ನು ಏರಿಕೆ ಮಾಡಿದೆ. ಹಿರಿಯ ನಾಗರಿಕರಿಗೆ 2-3 ವರ್ಷ, 3-5 ವರ್ಷ ಹಾಗೂ 5-10 ವರ್ಷದ ಠೇವಣಿ ಮೇಲೆ ಶೇಕಡಾ 6.5ರ ಬದಲು ಶೇಕಡಾ 7ರಷ್ಟು ಬಡ್ಡಿ ಸಿಗಲಿದೆ.

65 ವರ್ಷ ಕೆಳಗಿನ ಗ್ರಾಹಕರಿಗೂ ಇದ್ರಲ್ಲಿ ಲಾಭ ಸಿಗಲಿದೆ. 7-45 ದಿನಗಳ ಠೇವಣಿಯಲ್ಲಿ ಶೇಕಡಾ 5.25ರ ಬದಲು 5.75ರಷ್ಟು ಬಡ್ಡಿ ಸಾಮಾನ್ಯ ಗ್ರಾಹಕರಿಗೂ ಸಿಗಲಿದೆ. 180-210 ದಿನಗಳ ಠೇವಣಿಗೆ ಶೇಕಡಾ 6.25ರ ಬದಲು 6.35ರಷ್ಟು ಬಡ್ಡಿ ಸಿಗಲಿದೆ. ಹೊಸ ಬಡ್ಡಿ ದರ ಇಂದಿನಿಂದಲೇ ಜಾರಿಗೆ ಬರಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...