alex Certify
ಕನ್ನಡ ದುನಿಯಾ       Mobile App
       

Kannada Duniya

ಬೃಹತ್ ಠೇವಣಿದಾರರಿಗೆ ಮತ್ತೆ ಸಿಹಿ ಸುದ್ದಿ ನೀಡಿದ SBI

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬೃಹತ್ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಮತ್ತೊಮ್ಮೆ ಹೆಚ್ಚಳ ಮಾಡಿದೆ. 10 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಡೆಪಾಸಿಟ್ ಗಳ ಮೇಲಿನ ಬಡ್ಡಿಯನ್ನು ಏರಿಕೆ ಮಾಡಲಾಗಿದೆ. ಕಳೆದ ನವೆಂಬರ್ ನಲ್ಲಷ್ಟೆ ಬಡ್ಡಿದರವನ್ನು ಶೇ.1ರಷ್ಟು ಏರಿಕೆ ಮಾಡಲಾಗಿತ್ತು.

1 ವರ್ಷದಿಂದ 455 ದಿನಗಳ ಠೇವಣಿಗೆ ಶೇ.5.25ರ ಬದಲು ಶೇ.6.25ರಷ್ಟು ಬಡ್ಡಿ ಸಿಗಲಿದೆ. 2 ರಿಂದ 10 ವರ್ಷಗಳ ಅವಧಿಯ ಬೃಹತ್ ಠೇವಣಿಗೆ ಶೇ.5.25ರ ಬದಲು ಶೇ.6ರಷ್ಟು ಬಡ್ಡಿ ನೀಡಲಾಗುತ್ತದೆ. ಈ ಮೊದಲು 180 ರಿಂದ 210 ದಿನಗಳ ಬೃಹತ್ ಠೇವಣಿಗೆ ಬಡ್ಡಿದರವನ್ನು ಶೇ.4.85 ರ ಬದಲು ಶೇ.6.25ಕ್ಕೆ ಏರಿಕೆ ಮಾಡಲಾಗಿತ್ತು.

ಹೊಸದಾಗಿ ಮಾಡುವ ಡೆಪಾಸಿಟ್ ಹಾಗೂ ಈಗಾಗ್ಲೇ ಮೆಚ್ಯೂರ್ ಆಗಿರುವ ಡೆಪಾಸಿಟ್ ಗಳ ನವೀಕರಣಕ್ಕೆ ಈ ಹೊಸ ಬಡ್ಡಿದರ ಅನ್ವಯವಾಗಲಿದೆ. ಬೃಹತ್ ಠೇವಣಿ ಮೆಚ್ಯೂರಿಟಿಗೂ ಮುನ್ನವೇ ಹಣ ಪಡೆದರೆ ಶೇ.1ರಷ್ಟು ದಂಡ ವಿಧಿಸಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...