alex Certify
ಕನ್ನಡ ದುನಿಯಾ       Mobile App
       

Kannada Duniya

ಎಸ್.ಬಿ.ಐ. ಹಳೆ ಡೆಬಿಟ್ ಕಾರ್ಡ್ ಬದಲಿಸುವ ಮೊದಲು ಇರಲಿ ಗಮನ

ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಹಕರು ಹಳೆ ಡೆಬಿಟ್ ಕಾರ್ಡ್ ಕೊಟ್ಟ ಹೊಸ ಕಾರ್ಡ್ ಪಡೆಯುವುದು ಅನಿವಾರ್ಯವಾಗಿದೆ. ಸ್ಟೇಟ್ ಬ್ಯಾಂಕ್ ಮ್ಯಾಗ್ನೆಟ್ ಕಾರ್ಡ್ ಬದಲು ಇಎಂವಿ ಚಿಪ್ ಡೆಬಿಟ್ ಕಾರ್ಡ್ ನೀಡ್ತಿದೆ. ಈ ಕೆಲಸಕ್ಕಾಗಿ ಗ್ರಾಹಕರು ಬ್ಯಾಂಕ್ ಗೆ ಹೋಗಬೇಕಾಗಿಲ್ಲ. ಆನ್ಲೈನ್ ನಲ್ಲಿಯೇ ಇದನ್ನು ಬದಲಿಸಬಹುದು.

ಆನ್ಲೈನ್ ನಲ್ಲಿ ಕಾರ್ಡ್ ಬದಲಿಸುವವರಿಗೆ ಎಸ್.ಬಿ.ಐ. ವೆಬ್ಸೈಟ್ ನಲ್ಲಿ ಅನೇಕ ಆಯ್ಕೆಗಳಿವೆ. ಇದ್ರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲವಾದ್ರೆ ಅನಗತ್ಯ ಹಣ ಖರ್ಚು ಮಾಡಬೇಕಾಗುತ್ತದೆ. ಆನ್ಲೈನ್ ನಲ್ಲಿ 6 ಡೆಬಿಟ್ ಕಾರ್ಡ್ ಆಯ್ಕೆಗಳಿವೆ. ಅದ್ರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಬೇರೆ ಬೇರೆ ಕಾರ್ಡಿಗೆ ಬೇರೆ ಬೇರೆ ಶುಲ್ಕ ನೀಡಬೇಕಾಗುತ್ತದೆ.

ಹಾಗೆ ಡೆಬಿಟ್ ಕಾರ್ಡ್ ಗೆ ತಕ್ಕಂತೆ ನಿರ್ವಹಣ ಶುಲ್ಕ ಹೆಚ್ಚು, ಕಡಿಮೆಯಿರುತ್ತದೆ. ಗ್ರಾಹಕರಿಗೆ ಅನುಕೂಲವಾಗಲು ಬ್ಯಾಂಕ್ ಗಳು ಬೇರೆ ಬೇರೆ ಡೆಬಿಟ್ ಕಾರ್ಡ್ ನೀಡುತ್ತದೆ. ವಿದೇಶಿ ಪ್ರವಾಸವನ್ನು ಹೆಚ್ಚೆಚ್ಚು ಮಾಡುವ ಗ್ರಾಹಕರಿಗೆ ಅನುಕೂಲವಾಗುವಂತಹ ಕಾರ್ಡ್ ಬ್ಯಾಂಕ್ ನೀಡುತ್ತದೆ. ಅದ್ರ ವಾರ್ಷಿಕ ನಿರ್ವಹಣಾ ಶುಲ್ಕವೂ ಹೆಚ್ಚಿರುತ್ತದೆ.

ಹಾಗೆ ಕಡಿಮೆ ನಿರ್ವಹಣಾ ಶುಲ್ಕದ ಕಾರ್ಡ್ ಕೂಡ ಲಭ್ಯವಿರುತ್ತದೆ. ನಿಮ್ಮ ಅನುಕೂಲಕ್ಕೆ ಯಾವುದು ಸರಿ ಎಂಬುದನ್ನು ನೋಡಿ ಆಯ್ಕೆ ಮಾಡಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...