alex Certify
ಕನ್ನಡ ದುನಿಯಾ       Mobile App
       

Kannada Duniya

ಅಸುರಕ್ಷಿತ ಡೆಬಿಟ್ ಕಾರ್ಡ್ ಗಳನ್ನು ಬ್ಲಾಕ್ ಮಾಡ್ತಿದೆ SBI

sbi

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮ್ಯಾಗ್ನೆಟಿಕ್ ಡೆಬಿಟ್ ಕಾರ್ಡ್ ಗಳ ಬದಲು ಇಎಂವಿ ಚಿಪ್ ಕಾರ್ಡ್ ಗಳನ್ನು ಗ್ರಾಹಕರಿಗೆ ವಿತರಿಸಲು ನಿರ್ಧರಿಸಿದೆ. ಆನ್ ಲೈನ್ ಬ್ಯಾಂಕಿಂಗ್ ಮೂಲಕ ಗ್ರಾಹಕರು ಚಿಪ್ ಕಾರ್ಡ್ ಗಳಿಗಾಗಿ ಅರ್ಜಿ ಸಲ್ಲಿಸಬೇಕು. ಆನ್ ಲೈನ್ ಬ್ಯಾಂಕಿಂಗ್ ಅನ್ನು ಇನ್ನಷ್ಟು ಸುರಕ್ಷಿತವಾಗಿಸಲು ಈ ಕ್ರಮ ಕೈಗೊಳ್ಳಲಾಗ್ತಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಲ್ಲಾ ಗ್ರಾಹಕರ ಮ್ಯಾಗ್ನೆಟಿಕ್ ಡೆಬಿಟ್ ಕಾರ್ಡ್ ಗಳನ್ನು ಬ್ಲಾಕ್ ಮಾಡಲಾಗ್ತಿದೆ. ಅದರ ಬದಲಾಗಿ ಗ್ರಾಹಕರು ಇಎಂವಿ ಚಿಪ್ ಕಾರ್ಡ್ ಪಡೆಯಬೇಕು. ಅದಕ್ಕಾಗಿ ತಮ್ಮ ತಮ್ಮ ಶಾಖೆಗಳಿಗೆ ಅರ್ಜಿ ಸಲ್ಲಿಸುವಂತೆ ಮನವಿ ಮಾಡಲಾಗಿದೆ.

ಕೆಲ ಅನುಮಾನಾಸ್ಪದ ವಹಿವಾಟಿನ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, 2016ರಲ್ಲಿ ಎಲ್ಲಾ ಡೆಬಿಟ್ ಕಾರ್ಡ್ ಗಳನ್ನು ಬ್ಲಾಕ್ ಮಾಡಿತ್ತು. ಆನ್ ಲೈನ್ ಬ್ಯಾಂಕಿಂಗ್ ಸೆಕ್ಯೂರಿಟಿ ಕೊರತೆಯಿಂದ ಆಗಾಗ ಗ್ರಾಹಕರು ವಂಚನೆಗೊಳಗಾಗುತ್ತಲೇ ಇದ್ದಾರೆ. ಅದನ್ನು ತಪ್ಪಿಸಲೆಂದೇ ಎಸ್ ಬಿ ಐ ಹೊಸ ಯೋಜನೆ ಹಮ್ಮಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...