alex Certify
ಕನ್ನಡ ದುನಿಯಾ       Mobile App
       

Kannada Duniya

SBI ಕ್ಲರ್ಕ್ ಹುದ್ದೆ ಪರೀಕ್ಷೆ ದಿನಾಂಕ ಮುಂದೂಡಿಕೆ

ಎಸ್ಬಿಐ ಕ್ಲರ್ಕ್ ಹುದ್ದೆಗೆ ನಡೆಯಬೇಕಿದ್ದ ಪೂರ್ವಭಾವಿ ಪರೀಕ್ಷೆ ದಿನಾಂಕವನ್ನು ಮುಂದೂಡಲಾಗಿದೆ. ಎಸ್ಬಿಐ ನ ಕೇಂದ್ರ ನೇಮಕಾತಿ ಮತ್ತು ಪ್ರಚಾರ ಇಲಾಖೆ ಬುಧವಾರ ಅಧಿಕೃತ ಪ್ರಕಟಣೆ ನೀಡಿದೆ. ಮಾರ್ಚ್/ಏಪ್ರಿಲ್ 2018ರಂದು ನಡೆಯಬೇಕಿದ್ದ ಪೂರ್ವಭಾವಿ ಪರೀಕ್ಷೆ ಜೂನ್/ಜುಲೈ 2018ರಂದು ನಡೆಯಲಿದೆ.

ಮಾರ್ಚ್ 1ರ ಬದಲು ಜೂನ್ 6, 2018ರಂದು ಅಭ್ಯರ್ಥಿಗಳು ಪರೀಕ್ಷೆ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗಿದೆ. ಇದ್ರ ಜೊತೆಗೆ ಮುಖ್ಯ ಪರೀಕ್ಷೆಯ ಪ್ರವೇಶ ಪತ್ರದ ಡೌನ್ಲೋಡ್ ದಿನಾಂಕದಲ್ಲೂ ಬದಲಾವಣೆಯಾಗಿದೆ. ಏಪ್ರಿಲ್ 26ರ ಬದಲು ಅಭ್ಯರ್ಥಿಗಳು ಜುಲೈ 23ರಂದು ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಮೇ 12ರಂದು ನಡೆಯಬೇಕಿದ್ದ ಮುಖ್ಯ ಪರೀಕ್ಷೆ ಆಗಸ್ಟ್ 5ರಂದು ನಡೆಯಲಿದೆ.

ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಪೂರ್ವಭಾವಿ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆಯನ್ನು ಸ್ಥಳೀಯ ಭಾಷೆಯಲ್ಲಿ ಬರೆಯಬೇಕು. ಪೂರ್ವಭಾವಿ ಪರೀಕ್ಷೆ ಒಂದು ಗಂಟೆಗಳ ಕಾಲ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...