alex Certify
ಕನ್ನಡ ದುನಿಯಾ       Mobile App
       

Kannada Duniya

ಉಳಿತಾಯ ಖಾತೆದಾರರಿಗೆ ಸಿಹಿ ಸುದ್ದಿ ಕೊಟ್ಟ ಎಸ್.ಬಿ.ಐ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉಳಿತಾಯ ಖಾತೆದಾರರಿಗೆ ಇಲ್ಲಿದೆ ಶುಭ ಸುದ್ದಿ. ನಾನ್ ಹೋಮ್ ಬ್ರಾಂಚ್‌ನಲ್ಲಿ ಹಣ ಠೇವಣಿ ಮಾಡಲು ಇದ್ದ ಗರಿಷ್ಠ ಮಿತಿಯನ್ನು ಎಸ್.ಬಿ.ಐ. ರದ್ದುಪಡಿಸಿದೆ. ಇದನ್ನು ಟ್ವಿಟರ್ ಮೂಲಕ ಪ್ರಕಟಿಸಿದೆ.

ಹೋಮ್ ಬ್ರಾಂಚ್ ಎಂದರೆ, ಗ್ರಾಹಕ ತನ್ನ ಬ್ಯಾಂಕ್ ಖಾತೆಯನ್ನು ಹೊಂದಿರುವ ಶಾಖೆಯಾಗಿದೆ. ಬ್ಯಾಂಕ್‌ನ ಉಳಿದ ಎಲ್ಲಾ ಶಾಖೆಗಳು ಗ್ರಾಹಕನಿಗೆ ನಾನ್ ಹೋಮ್ ಬ್ರಾಂಚ್ ಆಗಿರುತ್ತದೆ.
ಈ ಹಿಂದೆ ನಾನ್ ಹೋಮ್ ಬ್ರಾಂಚ್‌ನಲ್ಲಿ ಹಣ ಠೇವಣಿಗೆ 25,000 ರೂ.ನ ಗರಿಷ್ಠ ಮಿತಿ ಇತ್ತು.

ನಾನ್ ಹೋಮ್ ಬ್ರಾಂಚ್‌ಗಳಲ್ಲಿ ನಗದು ಠೇವಣಿಯ ಪ್ರತಿ ವಹಿವಾಟಿಗೆ ಎಸ್.ಬಿ.ಐ. 50 ರೂ. ಸುಂಕ (ಪ್ಲಸ್ ಜಿಎಸ್‌ಟಿ) ವಿಧಿಸುತ್ತದೆ.

ಎಸ್ಎಂಇ ವಿಭಾಗದ ಖಾತೆಗಳಿಗೆ, ನಾನ್ ಹೋಮ್ ಬ್ರಾಂಚ್‌ನಲ್ಲಿ ಪ್ರತಿ ದಿನಕ್ಕೆ ನಗದು ಠೇವಣಿ ಮಿತಿ 2 ಲಕ್ಷ ರೂ. ಮುಂದುವರಿಯಲಿದೆ ಎಂದು ಎಸ್.ಬಿ.ಐ. ಟ್ವೀಟ್‌ನಲ್ಲಿ ಹೇಳಿದೆ.

ಎಸ್.ಬಿ.ಐ. ಇವಿಎಂ ಚಿಪ್ ಡೆಬಿಟ್ ಕಾರ್ಡ್ ಅನ್ನು ಯಾವುದೇ ಶುಲ್ಕವಿಲ್ಲದೆ ಪಡೆದುಕೊಳ್ಳಿ, ಸುಧಾರಿತ ಭದ್ರತೆಯನ್ನು ನಿಮ್ಮ ಡೆಬಿಟ್ ಕಾರ್ಡ್‌ಗೆ ಪಡೆಯಿರಿ. ಇದಕ್ಕಾಗಿ ನಿಮ್ಮ ಶಾಖೆಯಲ್ಲಿ ಅಥವಾ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಎಂದೂ ಎಸ್.ಬಿ.ಐ. ಟ್ವೀಟ್ ಮೂಲಕ ಗ್ರಾಹಕರಿಗೆ ಮನವಿ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...