alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆ ಹೊಂದುವವರಿಗೆ ಇಲ್ಲಿದೆ ಶುಭ ಸುದ್ದಿ

ನವದೆಹಲಿ: ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್.ಬಿ.ಐ.) ಗೃಹ ಮತ್ತು ವಾಹನಗಳ ಸಾಲದ ಮೇಲಿನ ಬಡ್ಡಿಯನ್ನು ಪರಿಷ್ಕರಿಸಿದೆ.

ಗೃಹ ಸಾಲ ದರವನ್ನು ಶೇ. 0.05 ರಷ್ಟು ಕಡಿಮೆ ಮಾಡಿದೆ. 30 ಲಕ್ಷ ರೂ.ವರೆಗಿನ ಗೃಹ ಸಾಲಕ್ಕೆ 8.30 ದರ ನಿಗದಿಪಡಿಸಲಾಗಿದೆ. ಇದು ಉದ್ಯಮದಲ್ಲಿನ ಕಡಿಮೆ ಬಡ್ಡಿ ದರವಾಗಿದೆ.

ಇನ್ನು ಕಾರ್ ಮೇಲಿನ ಸಾಲದ ಬಡ್ಡಿಯನ್ನು ಶೇ. 8.7 ರಷ್ಟು ನಿಗದಿ ಮಾಡಲಾಗಿದೆ. ಸಾಲದ ಪ್ರಮಾಣ ಮತ್ತು ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಆಧರಿಸಿ ಶೇ. 8.75 ರಿಂದ ಶೇ. 9.25 ರ ವರೆಗೆ ಬಡ್ಡಿ ದರ ಇರುತ್ತದೆ. ನವೆಂಬರ್ 1 ರಿಂದಲೇ ಹೊಸ ದರಗಳು ಜಾರಿಗೆ ಬಂದಿವೆ.

ದರ ಕಡಿತದ ಪ್ರಯೋಜನವನ್ನು ಹೊಸ ಗ್ರಾಹಕರು ಪಡೆದುಕೊಳ್ಳಲಿದ್ದಾರೆ. ಉತ್ಪನ್ನದ ಕೊಡುಗೆ ಆಧರಿಸಿ ಚಿಲ್ಲರೆ ಸಾಲಗಳಿಗೆ ಕಡಿಮೆ ಬಡ್ಡಿ ದರವನ್ನು ವಿಧಿಸಲಾಗಿದೆ ಎಂದು ಎಸ್.ಬಿ.ಐ. ವ್ಯವಸ್ಥಾಪಕ ನಿರ್ದೇಶಕ(ಚಿಲ್ಲರೆ ಮತ್ತು ಡಿಜಿಟಲ್ ಬ್ಯಾಂಕಿಂಗ್) ಪಿ.ಕೆ. ಗುಪ್ತಾ ತಿಳಿಸಿದ್ದಾರೆ.

ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ ಸರ್ಕಾರ ಪ್ಯಾಕೇಜ್ ಘೋಷಿಸಿದ ನಂತರ ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...