alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಹಕರಿಗೆ ‘ಶಾಕಿಂಗ್’ ಸುದ್ದಿ ನೀಡಿದ ಎಸ್.ಬಿ.ಐ.

ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಎಸ್.ಬಿ.ಐ. ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ನೀಡಿದೆ. ಎಸ್.ಬಿ.ಐ. ತನ್ನ ಸಾಲದ ದರವನ್ನು 0.2 ಕ್ಕೆ ಏರಿಕೆ ಮಾಡಿದೆ. ಸೆಪ್ಟೆಂಬರ್ 1 ರಿಂದಲೇ ಹೊಸ ದರ ಜಾರಿಗೆ ಬಂದಿದೆ. ಎಸ್.ಬಿ.ಐ. ಎಂಸಿಎಲ್ಆರ್ ಹೆಚ್ಚಳ ಮಾಡಿರುವುದ್ರಿಂದ ಮನೆ, ಆಟೋ ಸೇರಿದಂತೆ ಸಾಲದ ಮೇಲಿನ ಬಡ್ಡಿ ದರದಲ್ಲಿ ಹೆಚ್ಚಳವಾಗಲಿದೆ.

ಬ್ಯಾಂಕ್ ಅಧಿಕೃತ ವೆಬ್ಸೈಟ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಒಂದು ವರ್ಷದ ಎಂಸಿಎಲ್ಆರ್ ಶೇಕಡಾ 8.25ರ ಬದಲು ಶೇಕಡಾ 8.45 ಆಗಲಿದೆ.ಎರಡು ವರ್ಷದ ಅವಧಿ ಸಾಲದ ಎಸ್ಬಿಐಎಂಸಿಎಲ್ ಶೇಕಡಾ 8.35 ರಿಂದ 8.55 ಆಗಲಿದೆ. ಮೂರು ವರ್ಷಕ್ಕೆ ಶೇಕಡಾ 8.45ರ ಬದಲು ಶೇಕಡಾ 8.65 ಆಗಿದೆ.

ಒಂದು ತಿಂಗಳ ಹಿಂದೆ ಆರ್ ಬಿ ಐ ರೆಪೋ ದರದಲ್ಲಿ ಏರಿಕೆ ಮಾಡಿದೆ. ರೆಪೋ ದರ 25 ಬೇಸಿಕ್ ಪಾಯಿಂಟ್ ಹೆಚ್ಚಾಗಿ ಶೇಕಡಾ 6.25 ಆಗಿದೆ. ಆರ್ ಬಿ ಐ ರೆಪೋ ದರ ಏರಿಸಿ ಒಂದು ತಿಂಗಳಾದ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಸಾಲದ ದರವನ್ನು ಹೆಚ್ಚಳ ಮಾಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...