alex Certify
ಕನ್ನಡ ದುನಿಯಾ       Mobile App
       

Kannada Duniya

SBI ಗ್ರಾಹಕರಿಗೆ ಮಹತ್ವದ ಮಾಹಿತಿ….

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತದ ಅತಿ ದೊಡ್ಡ ಬ್ಯಾಂಕ್. ದೇಶದಲ್ಲಿ 43,000ಕ್ಕೂ ಅಧಿಕ ಎಸ್ ಬಿ ಐ ಎಟಿಎಂಗಳಿವೆ. ಎಟಿಎಂ ಮೂಲಕ ಗ್ರಾಹಕರು ದಿನಕ್ಕೆ 2 ಲಕ್ಷ ರೂಪಾಯಿ ವಿತ್ ಡ್ರಾ ಮಾಡಲು ಅವಕಾಶವಿದೆ. ಎಸ್ ಬಿ ಐ ಎಟಿಎಂ ಕಾರ್ಡ್ ಗಳ ಮೂಲಕ 5 ಲಕ್ಷ ರೂ.ವರೆಗೂ ಆನ್ ಲೈನ್ ಖರೀದಿ ಮಾಡಬಹುದು.

ಎಸ್ ಬಿ ಐ ಕ್ಲಾಸಿಕ್ ಡೆಬಿಟ್-ಕ್ರೆಡಿಟ್ ಕಾರ್ಡ್ : ಎಸ್ ಬಿ ಐ ಕ್ಲಾಸಿಕ್ ಡೆಬಿಟ್ ಕಾರ್ಡ್ ಬಹು ಜನಪ್ರಿಯವಾಗಿದೆ. ಇದರಲ್ಲಿ ದಿನಕ್ಕೆ 40,000 ರೂ. ವಿತ್ ಡ್ರಾ ಮಾಡಬಹುದು. ನೀವು ಆನ್ ಲೈನ್ ವಹಿವಾಟು ಮಾಡಿದ್ರೆ ದಿನದ ಮಿತಿ 50,000 ರೂಪಾಯಿ. ಈ ಕಾರ್ಡ್ ಬಳಕೆಗೆ 300 ರೂ. ಶುಲ್ಕ ಜೊತೆಗೆ ಶೇ.18ರಷ್ಟು ಜಿಎಸ್ಟಿ ವಿಧಿಸಲಾಗುತ್ತದೆ. ಇದರ ಜೊತೆಗೆ ವಾರ್ಷಿಕ 100 ರೂ. ಶುಲ್ಕ ಹಾಗೂ ಜಿಎಸ್ಟಿಯನ್ನು ಗ್ರಾಹಕರು ಪಾವತಿಸಬೇಕು.

ಎಸ್ ಬಿ ಐ ಪ್ರೈಡ್ ಮಾಸ್ಟರ್ ಡೆಬಿಟ್ – ಎಟಿಎಂ ಕಾರ್ಡ್: ಈ ಕಾರ್ಡ್ ಮೂಲಕ ದಿನಕ್ಕೆ 1 ಲಕ್ಷ ರೂ. ವಿತ್ ಡ್ರಾ ಮಾಡಲು ಅವಕಾಶವಿದೆ. ಆನ್ ಲೈನ್ ವಹಿವಾಟಿಗೆ 2 ಲಕ್ಷ ರೂ. ಮಿತಿ ನಿಗದಿಪಡಿಸಲಾಗಿದೆ. ಕ್ಲಾಸಿಕ್ ಡೆಬಿಟ್&ಕ್ರೆಡಿಟ್ ಕಾರ್ಡ್ ನಂತೆ ಇದರಲ್ಲೂ 300 ರೂ. ಶುಲ್ಕ ಹಾಗೂ ಜಿಎಸ್ಟಿ ವಿಧಿಸಲಾಗುತ್ತದೆ. ಜೊತೆಗೆ ವಾರ್ಷಿಕ ನಿರ್ವಹಣಾ ವೆಚ್ಚ 250 ರೂ. ಹಾಗೂ ಶೇ.18ರಷ್ಟು ಜಿಎಸ್ಟಿಯನ್ನು ಗ್ರಾಹಕರಿಂದ ಪಡೆಯಲಾಗುತ್ತದೆ.

ಎಸ್ ಬಿ ಐ ಪ್ಲಾಟಿನಂ ಡೆಬಿಟ್ – ಎಟಿಎಂ ಕಾರ್ಡ್ : ಈ ಕಾರ್ಡ್ ಮೂಲಕ ಪ್ರತಿ ದಿನ 2 ಲಕ್ಷ ರೂಪಾಯಿ ವಿತ್ ಡ್ರಾ ಮಾಡಬಹುದು. 5 ಲಕ್ಷ ರೂ.ವರೆಗೂ ಆನ್ ಲೈನ್ ವಹಿವಾಟು ನಡೆಸಬಹುದು. ವಿತ್ ಡ್ರಾ ಮಿತಿ ಹೆಚ್ಚಾಗಿರುವುದರಿಂದ ಶುಲ್ಕ ಕೂಡ ಅಧಿಕ. ಈ ಕಾರ್ಡ್ ಬಳಕೆದಾರರಿಗೆ 350 ರೂ. ಶುಲ್ಕದ ಜೊತೆಗೆ ಜಿಎಸ್ಟಿ ಕೂಡ ವಿಧಿಸಲಾಗುತ್ತದೆ. ವಾರ್ಷಿಕ ನಿರ್ವಹಣಾ ಶುಲ್ಕ 300 ರೂ. ಹಾಗೂ ಜಿಎಸ್ಟಿ.

ಎಸ್ ಬಿ ಐ ಎಟಿಎಂ : ಎಸ್ ಬಿ ಐ ಎಟಿಎಂನಲ್ಲಿ ಬ್ಯಾಂಕಿಂಗ್ ಆಪ್ಷನ್ ಸೆಲೆಕ್ಟ್ ಮಾಡಿಕೊಂಡು ಗ್ರಾಹಕರು ಹಣ ವಿತ್ ಡ್ರಾ ಮಾಡಬಹುದು. ಪಿನ್ ನಂಬರ್ ಬದಲಾಯಿಸಬಹುದು. ಬ್ಯಾಲೆನ್ಸ್ ಎನ್ ಕ್ವೈರಿ, ಮಿನಿ  ಸ್ಟೇಟ್ಮೆಂಟ್ ಪಡೆಯಲು ಅವಕಾಶವಿದೆ. ಪ್ರತಿದಿನ ಗರಿಷ್ಠ 40,000 ರೂ.ವರೆಗೆ ಕಾರ್ಡ್ ಟು ಕಾರ್ಡ್ ಟ್ರಾನ್ಸ್ ಫರ್ ಕೂಡ ಮಾಡಬಹುದು. ಕ್ರೆಡಿಟ್ ಕಾರ್ಡ್ ಪೇಮೆಂಟ್, ಎಸ್ ಬಿ ಐ ಲೈಫ್ ಇನ್ಷೂರೆನ್ಸ್ ಪಾವತಿ, ಮೊಬೈಲ್ ಟಾಪಪ್ ಖರೀದಿ, ಚೆಕ್ ಬುಕ್ ರಿಕ್ವೆಸ್ಟ್ ಗೆ ಕೂಡ ಅವಕಾಶವಿದೆ. ಎಸ್ ಬಿ ಐನ ಹೊಸ ನಿಯಮದ ಪ್ರಕಾರ ಎಸ್ ಬಿ ಐ ಗ್ರಾಹಕರು ತಿಂಗಳಲ್ಲಿ 5 ಬಾರಿ ಉಚಿತವಾಗಿ ಎಟಿಎಂ ವಹಿವಾಟು ನಡೆಸಬಹುದು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...