alex Certify
ಕನ್ನಡ ದುನಿಯಾ       Mobile App
       

Kannada Duniya

SBI ಖಾತೆದಾರರಿಗೆ ಬೀಳುತ್ತೆ ಬರೆ

sbi-at

ನವದೆಹಲಿ: ಕೇಂದ್ರ ಸರ್ಕಾರ ದೊಡ್ಡ ಮೊತ್ತದ ನೋಟ್ ಬ್ಯಾನ್ ಮಾಡಿದ ಬಳಿಕ ಆರ್ಥಿಕ ವ್ಯವಸ್ಥೆ ಸುಧಾರಣೆಗೆ ಅನೇಕ ಕ್ರಮ ಕೈಗೊಂಡಿದ್ದು, ಅವುಗಳಲ್ಲಿ ನಗದು ರಹಿತ ವ್ಯವಹಾರ ಕೂಡ ಒಂದಾಗಿದೆ. ಆದರೆ, ಎಸ್.ಬಿ.ಐ. ನಗದು ರಹಿತ ವ್ಯವಹಾರಕ್ಕೂ ಶುಲ್ಕ ವಿಧಿಸಲು ಮುಂದಾಗಿದೆ ಎನ್ನಲಾಗಿದೆ.

ಭಾರತೀಯ ಸ್ಟೇಟ್ ಬ್ಯಾಂಕ್(ಎಸ್.ಬಿ.ಐ.)ನಲ್ಲಿ ಎ.ಟಿ.ಎಂ. ವಿತ್ ಡ್ರಾ, ಆನ್ ಲೈನ್ ವಹಿವಾಟು ಹಾಗೂ ನಗದು ರಹಿತ ವಹಿವಾಟಿನ ಮೇಲೆ ಜೂನ್ 1 ರ ಇಂದಿನಿಂದಲೇ ಪರಿಷ್ಕೃತ ಸೇವಾ ಶುಲ್ಕಗಳು ಜಾರಿಯಾಗಿವೆ.

ಸ್ಟೇಟ್ ಬ್ಯಾಂಕ್ ಬಡ್ಡಿ ಸೇವೆ, ನೋಟ್ ಎಕ್ಸ್ ಚೇಂಜ್, ತಕ್ಷಣದ ನಗದು ಪಾವತಿ ಸೇವೆ ಮೊದಲಾದ ಸೇವೆಗಳ ಶುಲ್ಕ ಪರಿಷ್ಕರಣೆಯಾಗಿದೆ.

ಮೊಬೈಲ್ ವ್ಯಾಲೆಟ್ ಬಳಸಿ ಎ.ಟಿ.ಎಂ. ಕಾರ್ಡ್ ಮೂಲಕ ಹಣ ವಿತ್ ಡ್ರಾ ಮಾಡಿದಲ್ಲಿ ಪ್ರತಿ ವ್ಯವಹಾರಕ್ಕೆ 25 ರೂ. ಶುಲ್ಕ ಪಾವತಿಸಬೇಕಿದೆ.

ಖಾತೆದಾರರು 10 ಚೆಕ್ ಗಳ ಬುಕ್ ಗೆ 30 ರೂ., 25 ಚೆಕ್ ಗಳ ಬುಕ್ ಗೆ 75 ರೂ., 50 ಚೆಕ್ ಗಳ ಬುಕ್ ಗೆ 150 ರೂ. ಪಾವತಿಸಬೇಕು. ಅಲ್ಲದೇ ಚೆಕ್ ಬುಕ್ ಪಡೆಯಲು ಸೇವಾ ತೆರಿಗೆಯನ್ನು ವಿಧಿಸಲಾಗುತ್ತದೆ.

ಉಳಿತಾಯ ಖಾತೆದಾರರು ಎಸ್.ಬಿ.ಐ.ನ ಎ.ಟಿ.ಎಂ.ನಲ್ಲಿ 5 ಸಲ, ಇತರೆ ಬ್ಯಾಂಕ್ ಎ.ಟಿ.ಎಂ.ಗಳಲ್ಲಿ 3 ಸಲ ವಿತ್ ಡ್ರಾ ಮಾಡಬಹುದಾಗಿದೆ.

ತಕ್ಷಣದ ನಗದು ಪಾವತಿ ಸೇವೆ 1 ಲಕ್ಷ ರೂ.ವರೆಗೆ 5 ರೂ. ಸೇವಾ ಶುಲ್ಕ ವಿಧಿಸಲಾಗುತ್ತದೆ. ಈ ಮೊತ್ತ ಹೆಚ್ಚಾದಂತೆ ಸೇವಾ ಶುಲ್ಕವೂ ಹೆಚ್ಚಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...