alex Certify
ಕನ್ನಡ ದುನಿಯಾ       Mobile App
       

Kannada Duniya

ಮಾ.31ರ ನಂತ್ರ ನಡೆಯಲ್ಲ ಈ ಬ್ಯಾಂಕ್ ಗಳ ಹಳೆ ಚೆಕ್ ಬುಕ್

ಈ ಆರು ಬ್ಯಾಂಕ್ ಗಳಲ್ಲಿ ಯಾವುದಾದ್ರೂ ಒಂದು ಬ್ಯಾಂಕ್ ನಲ್ಲಿ ನಿಮ್ಮ ಖಾತೆಯಿದ್ದರೆ ಈ ಸುದ್ದಿಯನ್ನು ಅವಶ್ಯವಾಗಿ ಓದಿ. ಈ ಬ್ಯಾಂಕ್ ನ ಚೆಕ್ ಬುಕ್ ಗಳು ಮಾರ್ಚ್ 31 ರ ನಂತ್ರ ಪ್ರಯೋಜನಕ್ಕೆ ಬರುವುದಿಲ್ಲ. ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಬಗ್ಗೆ ಸೂಚನೆ ನೀಡಿದೆ.

ಎಸ್ ಬಿ ಐ ಟ್ವಿಟ್ಟರ್ ನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಎಸ್ ಬಿ ಐ ನ 5 ಸಹಯೋಗಿ ಬ್ಯಾಂಕ್ ಗಳಲ್ಲಿ ಹಳೆ ಚೆಕ್ ನಡೆಯುವುದಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ ಎಂಡ್ ಜೈಪುರ್, ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ, ಸ್ಟೇಟ್ ಬ್ಯಾಂಕ್ ಆಫ್ ತಿರುವಾಂಕೂರು ಮತ್ತು ಭಾರತೀಯ ಮಹಿಳಾ ಬ್ಯಾಂಕ್ ನ ಹಳೆ ಚೆಕ್ ಗಳು ಏಪ್ರಿಲ್ 1 ರ ನಂತ್ರ ಮಾನ್ಯತೆ ಕಳೆದುಕೊಳ್ಳಲಿದೆ.

ಈ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಗ್ರಾಹಕರು ಎಟಿಎಂ, ಎಸ್ಎಂಎಸ್, ಮೊಬೈಲ್ ಬ್ಯಾಂಕಿಂಗ್ ಅಥವಾ ನೆಟ್ ಮೂಲಕ ಹೊಸ ಚೆಕ್ ಬುಕ್ ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಸೆಪ್ಟೆಂಬರ್ 30,2017 ರಂದು ಈ ಬ್ಯಾಂಕ್ ಗಳು ಸ್ಟೇಟ್ ಬ್ಯಾಂಕ್ ಇಂಡಿಯಾ ಜೊತೆ ವಿಲೀನವಾಗಿತ್ತು. ವಿಲೀನದ ವೇಳೆಯೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಬಗ್ಗೆ ಮಾಹಿತಿ ನೀಡಿತ್ತು. ಚೆಕ್ ಬುಕ್ ಬದಲಾಯಿಸಿಕೊಳ್ಳಲು ಮಾರ್ಚ್ 31 ರವರೆಗೆ ಅವಕಾಶ ನೀಡಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...