alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆ ಸಾಲಕ್ಕೆ ವಿಶೇಷ ಯೋಜನೆ ಘೋಷಿಸಿದ ಎಸ್.ಬಿ.ಐ.

ಕೊಚ್ಚಿನ್: ಕೇರಳದಲ್ಲಿ ಇತ್ತೀಚೆಗೆ ಟಾದ ನೆರೆ ಹಾವಳಿಯಿಂದ ತತ್ತರಿಸಿರುವ ಜನರ ಸಹಾಯಕ್ಕೆ ಸರ್ಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆ ಎಸ್.ಬಿ.ಐ. ಮುಂದಾಗಿದೆ.

ನೆರೆಯಿಂದ ಹಾನಿಗೊಳಗಾಗಿರುವ ಮನೆಗಳ ದುರಸ್ಥಿ ಹಾಗೂ ಪುನರ್ನಿರ್ಮಾಣ ಕಾಮಗಾರಿಗೆ ವಾರ್ಷಿಕ ಶೇ. 8.45 ಬಡ್ಡಿ ದರದಲ್ಲಿ ಅವಧಿ ಸಾಲ ನೀಡುವ ವಿಶೇಷ ಯೋಜನೆ ಘೋಷಿಸಿದೆ.

ಈ‌ ವಿಶೇಷ ಯೋಜನೆಯಲ್ಲಿ ಬಡ್ಡಿ‌ದರದ ಸಾಲ ಪಡೆಯುವವರಿಗೆ ಸಂಸ್ಕರಣ ಶುಲ್ಕದಿಂದ ಪೂರ್ಣ ವಿನಾಯಿತಿ‌ ನೀಡಲಾಗುತ್ತದೆ.

ಗರಿಷ್ಠ 10 ಲಕ್ಷ ರೂ.ವರೆಗೆ ಸಾಲವನ್ನು‌ ನೀಡಲಾಗುತ್ತದೆ. 2018 ರ ನ.30 ರೊಳಗೆ ಸಲ್ಲಿಸುವ ಅರ್ಜಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಜನಜೀವನವನ್ನು‌ ಸಾಮಾನ್ಯ ಸ್ಥಿತಿಗೆ ತರುವುದು ಇಂದಿನ ಅವಶ್ಯಕತೆ. ಕೇರಳದ ಜನರ ಅನುಕೂಲಕ್ಕಾಗಿ ಈ‌ ವಿಶೇಷ ಯೋಜನೆ ರೂಪಿಸಲಾಗಿದೆ ಎಂದು‌ ಬ್ಯಾಂಕ್ ಹೇಳಿದೆ.

ಶತಮಾನದಲ್ಲೆ ಕೇಳರಿಯದ ನೆರೆಯಿಂದ‌ ಇತ್ತೀಚೆಗೆ ತೊಂದರೆ ಅನುಭವಿಸಿದ ಕೇರಳದಲ್ಲಿ 400 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, ಸುಮಾರು‌ 20 ಸಾವಿರ ಕೋಟಿ ರೂ. ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...