alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ಗ್ರಾಹಕರು ಅಪ್ಪಿತಪ್ಪಿಯೂ ಮಾಡಬೇಡಿ ಈ ಕೆಲಸ

ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾ…? ಹಾಗಾದ್ರೆ ತುಂಬಾ ಎಚ್ಚರದಿಂದಿರಿ. ನೀವು ನಿಮಗೆ ಅರಿವಿಲ್ಲದಂತೆ ಮಾಡಬಹುದಾದ ಕೆಲ ತಪ್ಪುಗಳಿಂದ ನಿಮ್ಮ ಖಾತೆಯಲ್ಲಿರುವ ಹಣ ಕಳ್ಳರ ಪಾಲಾಗಹುದು. ಹಾಗಾಗಿ ಈ ಐದು ವಿಚಾರಗಳ ಬಗ್ಗೆ ತಿಳುವಳಿಕೆ ಇದ್ದರೆ ಒಳ್ಳೆಯದು.

ಮೊದಲನೆಯದಾಗಿ ಎಸ್.ಬಿ.ಐ. ನಿಮ್ಮ ಸಿವಿವಿ, ವೈಯಕ್ತಿಕ ಖಾತೆ ವಿವರ, ಐಡಿ , ಪಾಸ್ವರ್ಡ್, ಓಟಿಪಿ, ಸೇರಿದಂತೆ ಯಾವ ಮಾಹಿತಿಯನ್ನು ಕೇಳೋದಿಲ್ಲ. ಒಂದು ವೇಳೆ ಈ ವಿವರಗಳನ್ನ ಬಯಸಿ ಯಾರಾದ್ರು ನಿಮಗೆ ಕರೆ ಮಾಡಿದ್ರೆ ಅದು ಫೇಕ್ ಕಾಲ್ಸ್ ಅನ್ನೋದು ನಿಮ್ಮ ಗಮನಕ್ಕಿರಲಿ.

ಎರಡನೆಯದಾಗಿ ಎಸ್.ಬಿ.ಐ. ಅಕೌಂಟ್ ಮೂಲಕ ಆನ್ಲೈನ್ ವಹಿವಟು ನಡೆಸುವ ಸಂದದರ್ಭದಲ್ಲಿ ಸಾರ್ವಜನಿಕ ಸ್ಥಳಗಳಿಂದ ವಹಿವಾಟು ನಡೆಸಬೇಡಿ. ಅಂದ್ರೆ ಬಸ್ ನಿಲ್ದಾಣ, ರೈಲ್ವೇ ಸ್ಟೇಷನ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿನ ಉಚಿತ ವೈಫೈ ಬಳಸಿಕೊಂಡು ವಹಿವಾಟು ನಡೆಸುವ ಪ್ರಯತ್ನ ಮಾಡಬೇಡಿ.

ಮೂರನೆಯದಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಸಂಬಂಧಿಸಿದ ಮಾಹಿತಿಯನ್ನು ಮೊಬೈಲ್ ಅಥವಾ ಸ್ಮಾರ್ಟ್ ಫೋನ್ ನಲ್ಲಿ ಸೇವ್ ಮಾಡಿಟ್ಟುಕೊಳ್ಳಬೇಡಿ. ಅಥವಾ ಅದರ ಫೋಟೋ ಕಾಪಿಯನ್ನೂ ಇಟ್ಟುಕೊಳ್ಳಬೇಡಿ. ಒಂದು ವೇಳೆ ನಿಮ್ಮ ಫೋನ್ ಕಳುವಾದ್ರೆ ಅದರಲ್ಲಿನ ಮಾಹಿತಿ ಸುಲಭವಾಗಿ ವಂಚಕರ ಕೈಸೇರುತ್ತದೆ.

ನಾಲ್ಕನೆಯದಾಗಿ ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಗಳನ್ನ ಆದಷ್ಟು ನಿಮ್ಮ ಬಳಿಯೇ ಇಟ್ಟುಕೊಳ್ಳಿ. ಐದನೆಯದಾಗಿ ನಿಮ್ಮ ಬ್ಯಾಂಕ್ ಖಾತೆಯನ್ನ ಸಾಮಾಜಿಕ ಜಾಲತಾಣಗಳಲ್ಲಿ ಷೇರ್ ಮಾಡಬೇಡಿ. ಇದರಿಂದ ನಿಮಗೆ ಗೊತ್ತಿಲ್ಲದಂತೆ ಹಣ ನಿಮ್ಮ ಖಾತೆಯಿಂದ ಮಾಯವಾಗಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...