alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಎಸ್.ಬಿ.ಐ.ನ 18,135 ಎಟಿಎಂನಲ್ಲಿ ಈಗ್ಲೂ ಸಿಗ್ತಿಲ್ಲ ಹೊಸ ನೋಟು

ನೋಟು ನಿಷೇಧವಾಗಿ 21 ತಿಂಗಳು ಕಳೆದಿದೆ. ಹೊಸ ನೋಟು ಮುದ್ರಣವಾಗಿ ಮಾರುಕಟ್ಟೆಗೆ ಬಂದಿದ್ರೂ ದೇಶದ ದೊಡ್ಡ ಬ್ಯಾಂಕ್ ಎಸ್.ಬಿ.ಐ. ಎಟಿಎಂ ಮಾತ್ರ ನವೀಕರಣಗೊಂಡಿಲ್ಲ. ಹಳೆ ತಂತ್ರಜ್ಞಾನವಿರುವ ಕಾರಣ ಎಟಿಎಂ ಮಿಷನ್ ಗಳಲ್ಲಿ ಹೊಸ ನೋಟು ಬರ್ತಿಲ್ಲ.

ಎಸ್.ಬಿ.ಐ.ನ 18,135 ಎಟಿಎಂನಲ್ಲಿ ಈ ಸಮಸ್ಯೆ ಕಾಡ್ತಿದೆ. 22.50 ಕೋಟಿ ರೂಪಾಯಿಯಲ್ಲಿ 41,386 ಎಟಿಎಂಗಳನ್ನು ನವೀಕರಣ ಮಾಡಲಾಗಿದೆ. ಇದ್ರಲ್ಲಿ ಹೊಸ ನೋಟುಗಳು ಸಿಗ್ತಿವೆ. ಆದ್ರೆ ಇನ್ನೂ 18,135 ಎಟಿಎಂನಲ್ಲಿ ಹೊಸ ನೋಟುಗಳು ಬರ್ತಿಲ್ಲ. ಮಧ್ಯಪ್ರದೇಶದ ಸಾಮಾಜಿಕ ಕಾರ್ಯಕರ್ತರೊಬ್ಬರು ಬ್ಯಾಂಕ್ ಗೆ ಪ್ರಶ್ನೆ ಕೇಳಿದ್ದರು. ಎಸ್.ಬಿ.ಐ.ನ ಎಷ್ಟು ಎಟಿಎಂ ಮಷಿನ್ ಗಳಲ್ಲಿ 2 ಸಾವಿರ, 500 ಹಾಗೂ 200 ರೂಪಾಯಿ ಹೊಸ ನೋಟು ಸಿಗ್ತಿದೆ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರವಾಗಿ ಬ್ಯಾಂಕ್ ಈ ಅಂಕಿ-ಅಂಶ ನೀಡಿದೆ.

ರಿಸರ್ವ್ ಬ್ಯಾಂಕ್ ಕೆಲ ದಿನಗಳ ಹಿಂದಷ್ಟೇ 100 ರೂಪಾಯಿ ಹಾಗೂ 50 ರೂಪಾಯಿ ಹೊಸ ನೋಟುಗಳನ್ನು ಬಿಡುಗಡೆ ಮಾಡಿದೆ. ನೋಟುಗಳ ಅಳತೆ ಮೇಲೆ ಮತ್ತೆ ಬ್ಯಾಂಕ್ ಗಳು ಎಟಿಎಂನಲ್ಲಿ ಬದಲಾವಣೆ ಮಾಡಬೇಕಾಗುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...