alex Certify
ಕನ್ನಡ ದುನಿಯಾ       Mobile App
       

Kannada Duniya

ದೇಶದ ನಂಬರ್ 1 ಸಾಬೂನು ಯಾವ್ದು ಗೊತ್ತಾ…?

ಜಾಹೀರಾತು ಕ್ಷೇತ್ರದಲ್ಲಿ ಎಲ್ಲರಿಗಿಂತ ಮುಂದಿರುವ ಲಕ್ಸ್ ಸಾಬೂನು ಮಾರಾಟ ವಿಚಾರದಲ್ಲಿ ಹಿಂದೆ ಬಿದ್ದಿದೆ. ದೇಶದ ನಂಬರ್ ಒನ್ ಸ್ಥಾನದಲ್ಲಿದ್ದ ಲಕ್ಸ್ ಈಗ ಮೂರನೇ ಸ್ಥಾನಕ್ಕೆ ಕುಸಿದಿದೆ. ಲಕ್ಸ್ ಹಿಂದಿಕ್ಕಿರುವ ವಿಪ್ರೋ ಬ್ರ್ಯಾಂಡ್ ಸಂತೂರ್ ಎರಡನೇ ಸ್ಥಾನಕ್ಕೇರಿದೆ. ಹಿಂದೂಸ್ತಾನ್ ಯೂನಿಲಿವರ್ ನ ಅತ್ಯಂತ ಜನಪ್ರಿಯ ಸೋಪ್ ಲೈಫ್ ಬಾಯ್ ಮೊದಲ ಸ್ಥಾನದಲ್ಲಿದೆ.

IMRB ಹೌಸ್ಹೋಲ್ಡ್ ಪ್ಯಾನೆಲ್ ಅಂಕಿ-ಅಂಶದ ಪ್ರಕಾರ, ಈ ಹಿಂದೆ ಲಕ್ಸ್ ಎರಡನೇ ಸ್ಥಾನದಲ್ಲಿತ್ತು. ಜೂನ್ ನಲ್ಲಿ ಸಂತೂರ್ ಸೋಪ್ ಮಾರಾಟದಲ್ಲಿ ಏರಿಕೆ ಕಂಡು ಬಂದಿದೆ. ಶೇಕಡಾ 14.9ರಷ್ಟು ಮಾರುಕಟ್ಟೆ ಪಾಲನ್ನು ಸಂತೂರ್ ಹೊಂದಿದ್ದರೆ ಲೈಫ್ ಬಾಯ್ ಶೇಕಡಾ 18.7 ರಷ್ಟು ಪಾಲನ್ನು ಹೊಂದಿದೆ.

ವಿತರಣಾ ಜಾಲದ ವಿಸ್ತರಣೆ, ಜಾಹೀರಾತು ಹಾಗೂ ಹೊಸ ಸಂತೂರ್ ಸೋಪ್ ಈ ಯಶಸ್ಸಿಗೆ ಕಾರಣವೆಂದು ಕಂಪನಿ ಹೇಳಿದೆ. ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಸಂತೂರ್ ಬಿಡುಗಡೆ ಮಾಡಲಾಗಿದೆ. 2017-2018 ರ ಅವಧಿಯಲ್ಲಿ 1,930 ಕೋಟಿ ಮೌಲ್ಯದ ಸೋಪು ಮಾರಾಟವಾಗಿದೆ ಎಂದು ಕಂಪನಿ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...