alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯ ಮಹಿಳೆಯರಿಗೊಂದು ಶಾಕಿಂಗ್ ಸುದ್ದಿ…!

ಸ್ಯಾನಿಟರಿ ನ್ಯಾಪ್ಕಿನ್ ಗಳ ಬೆಲೆಯಲ್ಲಿ ಭಾರೀ ವ್ಯತ್ಯಾಸ ಆಗಬಹುದು ಅಂತ ನಿರೀಕ್ಷೆಯಲ್ಲಿದ್ದ ಭಾರತದ ಮಹಿಳೆಯರಿಗೆ ಇದು ಕಹಿಯಾದ ಸುದ್ದಿ. ಸ್ಯಾನಿಟರಿ ನ್ಯಾಪ್ಕಿನ್ ಗಳ ಮಾರಾಟ ದರದಲ್ಲಿ ಸರ್ಕಾರ ಹೇಳಿದಂತೆ ಶೇಕಡಾ 12 ರಷ್ಟು ಬೆಲೆ ಕಡಿಮೆ ಆಗೋದಿಲ್ಲ. ಬದಲಾಗಿ ಶೇಕಡಾ 1.5% ರಿಂದ 2.5 % ರಷ್ಟು ದರ ಕಡಿಮೆಯಾಗಬಹುದು ಅಂತ ನ್ಯಾಪ್ಕಿನ್ ತಯಾರಕ ಕಂಪನಿಗಳು ತಮ್ಮ ವಾದವನ್ನು ಮಂಡಿಸುತ್ತಿವೆ.

ಸ್ಯಾನಿಟರಿ ನ್ಯಾಪ್ಕಿನ್ ಗಳ ಮೇಲೆ ಜಿಎಸ್ಟಿ ಮತ್ತು ತೆರಿಗೆ ವಿನಾಯ್ತಿಯನ್ನು ಘೋಷಿಸುವ ಮೂಲಕ ಸರ್ಕಾರ ಮಹತ್ವದ ನಿರ್ಧಾರವನ್ನು ಪ್ರಕಟಿಸಿತ್ತು. ಆದ್ರೆ ಕೆಲ ಸ್ಯಾನಿಟರಿ ಪ್ಯಾಡ್ ತಯಾರಿಕಾ ಸಂಸ್ಥೆಗಳು ಒಂದಾಗಿ ಸರ್ಕಾರದ ನಿರ್ಣಯದ ವಿರುದ್ಧವೇ ಚಳುವಳಿಯನ್ನು ಆರಂಭಿಸುತ್ತಿರುವ ಹಾಗಿದೆ.

ಸ್ಯಾನಿಟರಿ ಪ್ಯಾಡ್ ತಯಾರಿಕಾ ಸಂಸ್ಥೆಗಳ ಪ್ರತಿನಿಧಿಗಳೇ ಹೇಳುವ ಪ್ರಕಾರ ಜನಪ್ರಿಯ ಬ್ರ್ಯಾಂಡ್ ಸಂಸ್ಥೆಗಳು ಸರ್ಕಾರದ ಈ ನಿರ್ಣಯದ ಬಗ್ಗೆ ತೃಪ್ತಿ ಹೊಂದಿಲ್ಲ. ಜಿಎಸ್ಟಿ ಮತ್ತು ತೆರಿಗೆ ಮುಕ್ತವಾದ ಸ್ಯಾನಿಟರಿ ಪ್ಯಾಡ್ ಮಾರಾಟ ಮಾಡಿದ್ರೆ ಸಂಸ್ಥೆಗಳು ಅಪಾರ ಪ್ರಮಾಣದ ನಷ್ಟವನ್ನು ಅನುಭವಿಸಬೇಕಾಗುತ್ತದೆಯಂತೆ. ಸದ್ಯ ಮಾರಾಟವಾಗ್ತಿರುವ ಹಣದ ಮುಕ್ಕಾಲು ಪಾಲು ಕಡಿಮೆ ಬೆಲೆಗೆ ಸ್ಯಾನಿಟರಿ ಪ್ಯಾಡ್ ಗಳನ್ನ ಮಾರಾಟ ಮಾಡುವ ಸ್ಥಿತಿ ನಿರ್ಮಾಣವಾಗಲಿದೆ. ಹಾಗಾಗಿ ಗ್ರಾಹಕರಿಗೆ ಕಡಿಮೆ ಗುಣಮಟ್ಟದ ಪ್ಯಾಡ್ ಗಳನ್ನು ಒದಗಿಸುವ ಸ್ಥಿತಿ ನಿರ್ಮಾಣವಾಗಬಹುದು ಅಂತ ಸಂಸ್ಥೆಗಳ ಪ್ರತಿನಿಧಿಗಳು ತಿಳಿಸಿದ್ದಾರೆ.

ಜಿಎಸ್ಟಿಯಲ್ಲಿ ವಿನಾಯಿತಿ ಸಿಕ್ಕರೂ ಪ್ಯಾಡ್ ತಯಾರಿಕಾ ಸಂಸ್ಥೆಗಳು ಭಾರತಕ್ಕೆ ಕಟ್ಟುತ್ತಿರುವ ತೆರಿಗೆಯಿಂದಲೂ ನಷ್ಟವಾಗಲಿದೆಯಂತೆ. ಹಾಗಾಗಿ ಈ ಹಿಂದೆ ಸ್ಯಾನಿಟರಿ ಪ್ಯಾಡ್ ತಯಾರಿಕಾ ಸಂಸ್ಥೆಗಳಿಗೆ ವಿಧಿಸಿದ್ದ 12 ಪರ್ಸೆಂಟ್ ಜಿಎಸ್ಟಿಯಲ್ಲಿ 1.5% ನಿಂದ 2.5% ವಿನಾಯಿತಿ ಮಾರ್ಜಿನ್ ಇಟ್ಟು ಮಾರಾಟ ಮಾಡುವ ನಿರ್ಧಾರಕ್ಕೆ ಸ್ಯಾನಿಟರಿ ಪ್ಯಾಡ್ ತಯಾರಿಕಾ ಸಂಸ್ಥೆಗಳ ಆಡಳಿತ ಮಂಡಳಿ ಬಂದಿವೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...