alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ರೈಲು ನಿಲ್ದಾಣದಲ್ಲಿ ಸಿಗುತ್ತೆ ಕಾಂಡೋಮ್

ರೈಲು ನಿಲ್ದಾಣದ ಒಳಗೆ ಹಾಗೂ ಹೊರಗೆ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿರುವ ರೈಲ್ವೆ ಇಲಾಖೆ ಜೊತೆಗೆ ಸುಲಭ ದರದಲ್ಲಿ ಕಾಂಡೋಮ್ ಹಾಗೂ ಸ್ಯಾನಿಟರಿ ನ್ಯಾಪ್ಕಿನ್ ಒದಗಿಸುವ ವ್ಯವಸ್ಥೆಯನ್ನು ಕಲ್ಪಿಸಲಿದೆ.

ದೇಶದ 8,500 ರೈಲು ನಿಲ್ದಾಣಗಳಲ್ಲಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲಾಗುವುದಲ್ಲದೇ ಭಾರತೀಯ ಹಾಗೂ ವೆಸ್ಟರ್ನ್ ಮಾದರಿಯ ಕಮೋಡ್ ಗಳನ್ನು ಅಳವಡಿಸಲಾಗುತ್ತದೆ.

ದೇಶದ ಹಲವು ರೈಲು ನಿಲ್ದಾಣಗಳ ಸುತ್ತ ಸ್ಲಂಗಳಲ್ಲಿ ಬಡಜನತೆ ವಾಸಿಸುತ್ತಿದ್ದು, ಶೌಚಾಲಯ ಸೌಲಭ್ಯವಿಲ್ಲದ ಕಾರಣ, ಇವರುಗಳು ಇದಕ್ಕಾಗಿ ಬಯಲನ್ನೇ ಆಶ್ರಯಿಸಿದ್ದಾರೆ. ಹೀಗಾಗಿ ರೈಲು ನಿಲ್ದಾಣದ ಹೊರಗೂ ಶೌಚಾಲಯ ನಿರ್ಮಿಸಿ, ಜೊತೆಗೆ ಅಂಗಡಿಯಲ್ಲಿ ಕಾಂಡೋಮ್ಸ್ ಹಾಗೂ ಸ್ಯಾನಿಟರಿ ನ್ಯಾಪ್ಕೀನ್ ಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...