alex Certify
ಕನ್ನಡ ದುನಿಯಾ       Mobile App
       

Kannada Duniya

ತಲೆ ತಿರುಗಿಸುತ್ತೆ ಸ್ಯಾಮ್ಸಂಗ್ ಪೋಲ್ಡೆಬಲ್ ಮೊಬೈಲ್ ಬೆಲೆ…!

ಸ್ಯಾಮ್ಸಂಗ್ ತನ್ನ ಬಹುನಿರೀಕ್ಷಿತ ಪೋಲ್ಡೆಬಲ್ ಸ್ಮಾರ್ಟ್ಫೋನ್ ಗ್ಯಾಲಕ್ಸಿ ಎಕ್ಸ್ ಫೋನನ್ನು ಮುಂದಿನ ವರ್ಷಾರಂಭದಲ್ಲಿ ಬಿಡುಗಡೆ ಮಾಡಲಿದೆ. ಈ ಫೋನ್ ಬಗ್ಗೆ ಅನೇಕ ದಿನಗಳಿಂದ ಚರ್ಚೆಯಾಗ್ತಿದೆ. ಈಗ ಸ್ಮಾರ್ಟ್ಫೋನ್ ಗ್ಯಾಲಕ್ಸಿ ಎಕ್ಸ್ ಬಗ್ಗೆ ಮತ್ತೊಂದಿಷ್ಟು ಮಾಹಿತಿ ಹೊರ ಬಿದ್ದಿದೆ.

ವರದಿ ಪ್ರಕಾರ ಸ್ಯಾಮ್ಸಂಗ್ ನ ಮೊದಲ ಪೋಲ್ಡೆಬಲ್ ಸ್ಮಾರ್ಟ್ಫೋನ್ ಬೆಲೆ 2 ಮಿಲಿಯನ್ ಕೊರಿಯನ್ ವಾಂಗ್ ಅಂತೆ. ಅಂದ್ರೆ ಸುಮಾರು 1,25,000 ರೂಪಾಯಿಯಾಗಲಿದೆ. ಈ ವರದಿ ಸತ್ಯವಾಗಿದ್ದರೆ ಸ್ಯಾಮ್ಸಂಗ್ ಗ್ಯಾಲಕ್ಸಿ ಎಕ್ಸ್ ವಿಶ್ವದ ಅತ್ಯಂತ ದುಬಾರಿ ಮೊಬೈಲ್ ಆಗಲಿದೆ.

ಸ್ಯಾಮ್ಸಂಗ್ ಜೊತೆ ಒಪ್ಪಂದ ಮಾಡಿಕೊಂಡಿರುವ ಕಂಪನಿಗಳು ಬಿಡಿಭಾಗಗಳನ್ನು ನವೆಂಬರ್ ನಲ್ಲಿ ಕಳುಹಿಸಲಿವೆಯಂತೆ. ಅಂದ್ರೆ ನವೆಂಬರ್ ನಂತ್ರ ಮೊಬೈಲ್ ವಿನ್ಯಾಸಗೊಳ್ಳಲಿದೆ. ಮುಂದಿನ ವರ್ಷಾರಂಭದಲ್ಲಿ ಮೊಬೈಲ್ ಮಾರುಕಟ್ಟೆಗೆ ಬರಲಿದೆ. ಮಾಹಿತಿ ಪ್ರಕಾರ ಸ್ಯಾಮ್ಸಂಗ್ ಗ್ಯಾಲಕ್ಸಿ ಎಕ್ಸ್ ಫೋನ್ 7.3 ಇಂಚಿನ OLED ಸ್ಕ್ರೀನ್ ಹೊಂದಿರಲಿದೆಯಂತೆ. ಪೋಲ್ಡ್ ಆದ ಮೇಲೆ 4.5 ಇಂಚಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...