alex Certify
ಕನ್ನಡ ದುನಿಯಾ       Mobile App
       

Kannada Duniya

ವಾವ್ಹ್…! ಸ್ಯಾಮ್ಸಂಗ್ ನ ಎರಡು ಸ್ಮಾರ್ಟ್ಫೋನ್ ಬೆಲೆಯಲ್ಲಿ ಗಣನೀಯ ಇಳಿಕೆ

ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿರುವ ಸ್ಯಾಮ್ಸಂಗ್ ಕಂಪನಿ ತನ್ನ ಭಾರತೀಯ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಸ್ಯಾಮ್ಸಂಗ್ ಭಾರತದಲ್ಲಿ ತನ್ನೆರಡು ಸ್ಮಾರ್ಟ್ಫೋನ್ ಗಳ ಬೆಲೆಯಲ್ಲಿ ಇಳಿಕೆ ಮಾಡಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎ6 ಹಾಗೂ ಗ್ಯಾಲಕ್ಸಿ ಎ8 ಸ್ಟಾರ್ ಮೊಬೈಲ್ ಬೆಲೆಯನ್ನು ಇಳಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾದಾಗ ಸ್ಯಾಮ್ಸಂಗ್ ಗ್ಯಾಲಕ್ಸಿ ಎ6 ಹಾಗೂ ಗ್ಯಾಲಕ್ಸಿ ಎ8 ಸ್ಟಾರ್ ಮೊಬೈಲ್ ಬೆಲೆ ಕ್ರಮವಾಗಿ 25,990 ರೂಪಾಯಿ ಹಾಗೂ  34,990 ರೂಪಾಯಿಯಿತ್ತು. ಆದ್ರೀಗ ಬೆಲೆಯಲ್ಲಿ ದೊಡ್ಡ ಮಟ್ಟದ ಇಳಿಕೆಯಾಗಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎ6 ಮೊಬೈಲ್ 18,990 ರೂಪಾಯಿ ಹಾಗೂ ಗ್ಯಾಲಕ್ಸಿ ಎ8 ಸ್ಟಾರ್ ಮೊಬೈಲ್ 29,990 ರೂಪಾಯಿಗೆ ಸಿಗಲಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಎ6 ಮೊಬೈಲ್ ಬೆಲೆ 7 ಸಾವಿರ ರೂಪಾಯಿ ಹಾಗೂ ಗ್ಯಾಲಕ್ಸಿ ಎ8 ಸ್ಟಾರ್ ಬೆಲೆ 6 ಸಾವಿರ ರೂಪಾಯಿ ಕಡಿತವಾಗಿದೆ. ಎರಡೂ ಸ್ಮಾರ್ಟ್ಫೋನ್ ಗಳು ಸಾಕಷ್ಟು ವೈಶಿಷ್ಟ್ಯತೆಯನ್ನು ಹೊಂದಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎ6 ಮೊಬೈಲ್ 4 ಜಿಬಿ ರ್ಯಾಮ್ ಹಾಗೂ 64 ಜಿಬಿ ಸ್ಟೋರೇಜ್ ಹೊಂದಿದೆ. ಗ್ಯಾಲಕ್ಸಿ ಎ8 ಸ್ಟಾರ್ ಮೊಬೈಲ್ 6 ಜಿಬಿ ರ್ಯಾಮ್ ಹಾಗೂ 64 ಜಿಬಿ ಸ್ಟೋರೇಜ್ ಹೊಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...