alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಬ್ಬಾ: ಈ ಟಿವಿ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ…!

ಸ್ಯಾಮ್‌ಸಂಗ್‌ ತನ್ನ ವಿನೂತನ ಎಲ್ ಇಡಿ ಟಿವಿಯನ್ನು ಪರಿಚಯಿಸಿದ್ದು, ಇದರ ಮೊತ್ತ ಒಂದು ಕೋಟಿಯಿಂದ 3.6 ಕೋಟಿಯ ಶ್ರೇಣಿಯಲ್ಲಿದೆ ಎಂದು ಹೇಳಿದೆ.

“ಎಲ್ ಇಡಿ ಫಾರ್ ಹೋಂ” ಎನ್ನುವ ಪರಿಕಲ್ಪನೆಯಲ್ಲಿ ತಯಾರಾಗಿರುವ ಈ ನೂತನ ಟಿವಿ, ಮನೆಯಲ್ಲಿಯೇ ಸಿನಿಮಾ ಥಿಯೇಟರ್ ಅನುಭವವನ್ನು ನೀಡಲಿದೆ. ಅದಕ್ಕಾಗಿ ಇದೇ ಮೊದಲ ಬಾರಿ ಆಕ್ಟೀವ್ ಎಲ್ ಇಡಿ ಎನ್ನುವ ತಂತ್ರಜ್ಞಾನ ಬಳಸಲಾಗಿದೆ.

110, 130, 220 ಫುಲ್ ಎಚ್ ಡಿ ಎನ್ನುವ ಮೂರು‌ ಶ್ರೇಣಿಯಲ್ಲಿ ಟಿವಿ ಇರಲಿದೆ.‌ ಸುತ್ತಮುತ್ತಲಿನ ವಾತಾವರಣಕ್ಕೆ ತಕ್ಕಂತೆ ಈ‌‌ ದುಬಾರಿ ಟಿವಿ ಹೊಂದಾಣಿಕೆ ಮಾಡಿಕೊಂಡು, ಉತ್ತಮ ಅನುಭವ ನೀಡಲಿದೆ ಎಂದು ಸಂಸ್ಥೆ ಹೇಳಿದೆ.

ಬಿಡುಗಡೆ ಬಳಿಕ‌ ನೂತನ ಉತ್ಪನ್ನದ ಬಗ್ಗೆ ಮಾತನಾಡಿದ ಸ್ಯಾಮ್‌ಸಂಗ್‌ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಪುನೀತ್ ಸೇಥಿ, ಗ್ರಾಹಕರಿಗೆ ಮನೆಯಲ್ಲಿಯೇ ಥಿಯೇಟರ್ ಅನುಭವ ನೀಡಬೇಕು ಎನ್ನುವ ಉದ್ದೇಶದಿಂದ ಈ ಟಿವಿ ಸಿದ್ಧಪಡಿಸಲಾಗಿದೆ. ಈ ಟಿವಿಯಲ್ಲಿ ಸಿನಿಮಾ ನೋಡುವುದು ಉತ್ತಮ‌‌ ಅನುಭವ ನೀಡುವುದರಲ್ಲಿ ಅನುಮಾನವಿಲ್ಲ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...