alex Certify
ಕನ್ನಡ ದುನಿಯಾ       Mobile App
       

Kannada Duniya

ಗೂಗಲ್ ಹೋಮ್ ಹಾಗೂ ಆ್ಯಪಲ್ ಗೆ ಟಕ್ಕರ್ ನೀಡಲು ಬರ್ತಿದೆ ಸ್ಯಾಮ್ಸಂಗ್ ಸ್ಪೀಕರ್

ಸ್ಮಾರ್ಟ್ ಸ್ಪೀಕರ್ ರೇಸ್ ಗೆ ಸ್ಯಾಮ್ಸಂಗ್ ಎಂಟ್ರಿಕೊಟ್ಟಿದೆ. ದಕ್ಷಿಣ ಕೋರಿಯಾ ಕಂಪನಿ Unpacked 2018 ಕಾರ್ಯಕ್ರಮದಲ್ಲಿ ಸ್ಮಾರ್ಟ್ಫೋನ್ ಸ್ಪೀಕರ್ Galaxy Home ಪರಿಚಯ ಮಾಡಿದೆ. ಈ ಸ್ಪೀಕರ್ ಆಪಲ್ ನ ಸ್ಮಾರ್ಟ್ ಸ್ಪೀಕರ್ HomePod ಗೆ ಟಕ್ಕರ್ ನೀಡಲಿದೆ. ಈ ಎರಡೂ ಸ್ಪೀಕರ್ ಉನ್ನತ ಮಟ್ಟದ್ದಾಗಿರುವುದ್ರಿಂದ ಎರಡೂ ಸ್ಪೀಕರ್ ಮಧ್ಯೆ ಸ್ಪರ್ಧೆ ಏಳಲಿದೆ. ಇದ್ರ ಜೊತೆ ಗೂಗಲ್ ಹೋಂ ಹಾಗೂ ಅಮೆಜಾನ್ ಎಕೋ ಗೂ ಸ್ಪರ್ಧೆ ನೀಡಲಿದೆ.

ಸ್ಯಾಮ್ಸಂಗ್ ಇದ್ರಲ್ಲಿ ಉತ್ತಮ ಗುಣಮಟ್ಟದ ಆಡಿಯೋ ನೀಡಲಿದೆಯಂತೆ. ಈ ಸ್ಪೀಕರ್ ಭರ್ಜರಿ ಸೌಂಡ್ ಹಾಗೂ ಉತ್ತಮ ವಿನ್ಯಾಸದೊಂದಿಗೆ ಗ್ರಾಹಕರಿಗೆ ಸಿಗಲಿದೆ. ಹೊರ ಕವಚ ಫ್ಯಾಬ್ರಿಕ್ ನಿಂದ ಕೂಡಿದ್ದು, ಮೂರು ಮೆಟಲ್ ಲೆಗ್ ನೀಡಲಾಗಿದೆ. ಹಾಗಾಗಿ ಸ್ಪೀಕರ್ ಇಟ್ಟುಕೊಳ್ಳುವುದು ಸುಲಭ.

ಸ್ಪೀಕರ್ ನ ಮೇಲ್ಭಾಗದಲ್ಲಿ ಬಟನ್ ನೀಡಲಾಗಿದೆ. ಹಾಡು ಬದಲಿಸುವ ಅಥವಾ ಸೌಂಡ್ ಹೆಚ್ಚು ಮಾಡಲು ಇದು ನೆರವಾಗುತ್ತದೆ. ಕಾರ್ಯಕ್ರಮದಲ್ಲಿ ಸ್ಪೀಕರ್ ಬಗ್ಗೆ ಸ್ಯಾಮ್ಸಂಗ್ ಮಾಹಿತಿ ನೀಡಿದೆ. ಆದ್ರೆ ಇದ್ರ ಬೆಲೆಯೆಷ್ಟು ಹಾಗೂ ಯಾವಾಗ ಇದು ಮಾರುಕಟ್ಟೆಗೆ ಬರಲಿದೆ ಎನ್ನುವ ಮಾಹಿತಿ ನೀಡಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...