alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿ ಬಿಡುಗೆಯಾಯ್ತು 3 ರಿಯಲ್ ಕ್ಯಾಮರಾವುಳ್ಳ ಗ್ಯಾಲಕ್ಸಿ ಎ7

ದಕ್ಷಿಣ ಕೋರಿಯಾ ತಂತ್ರಜ್ಞಾನ ದೈತ್ಯ ಸ್ಯಾಮ್ಸಂಗ್ ಭಾರತದಲ್ಲಿ ಗ್ಯಾಲಕ್ಸಿ ಎ7 ಮೊಬೈಲ್ ಬಿಡುಗಡೆ ಮಾಡಿದೆ. ಮೂರು ರಿಯಲ್ ಕ್ಯಾಮರಾ ಹೊಂದಿರುವ ಕಂಪನಿಯ ಮೊದಲ ಮೊಬೈಲ್ ಇದಾಗಿದೆ. ಇದ್ರ ಬೆಲೆ 23,990 ರೂಪಾಯಿಯಿಂದ ಶುರುವಾಗಲಿದೆ.

ಒಂದು 4 ಜಿಬಿ ರ್ಯಾಮ್ ಹಾಗೂ 64 ಜಿಬಿ ಇಂಟರ್ನಲ್ ಮೆಮೋರಿ ಹೊಂದಿದ್ದರೆ ಇನ್ನೊಂದು 6 ಜಿಬಿ ರ್ಯಾಮ್ ಹಾಗೂ 128 ಜಿಬಿ ಇಂಟರ್ನಲ್ ಮೆಮೋರಿ ಹೊಂದಿದೆ. 6 ಜಿಬಿ ಮೊಬೈಲ್ ಬೆಲೆ 28,990 ರೂಪಾಯಿ. ಈ ಸ್ಮಾರ್ಟ್ಫೋನ್ ಫ್ಲಿಪ್ಕಾರ್ಟ್, ಸ್ಯಾಮ್ಸಂಗ್ ಆನ್ಲೈನ್ ಸ್ಟೋರ್ ಹಾಗೂ ಸ್ಯಾಮ್ಸಂಗ್ ಓಪ್ರಾ ಹೌಸ್ನಲ್ಲಿ ಲಭ್ಯವಿದೆ. ಗ್ರಾಹಕರಿಗೆ ಮೊಬೈಲ್ ಸೆಪ್ಟೆಂಬರ್ 27 ರ ನಂತ್ರ ಸಿಗಲಿದೆ.

ಗ್ಯಾಲಕ್ಸಿ A7 6 ಇಂಚಿನ ಪೂರ್ಣ ಎಚ್ಡಿ ಪ್ಲಸ್ ಸೂಪರ್ ಅಮೋಲ್ಡ್ ಡಿಸ್ಪ್ಲೇ ಹೊಂದಿದೆ. ಹಿಂಭಾಗದಲ್ಲಿ ಮೂರು ಕ್ಯಾಮರಾ ನೀಡಲಾಗಿದೆ. ಒಂದು 27 ಮೆಗಾಪಿಕ್ಸಲ್ ಮತ್ತೊಂದು 8 ಮೆಗಾಪಿಕ್ಸಲ್ ಹಾಗೂ ಕೊನೆಯದಾಗಿ  5 ಮೆಗಾಪಿಕ್ಸಲ್ ಕ್ಯಾಮರಾ ಇದ್ರಲ್ಲಿದೆ. ಎಲ್ಇಡಿ ಫ್ಲಾಶ್ ಜೊತೆ 24 ಮೆಗಾಪಿಕ್ಸಲ್ ಫ್ರಂಟ್ ಕ್ಯಾಮರಾ ಕೂಡ ನೀಡಲಾಗಿದೆ. ಗ್ಯಾಲಕ್ಸಿ ಎ7 ಮೊಬೈಲ್ ಗೆ 3,300 mAh ಬ್ಯಾಟರಿ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...