alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಯಾಮ್ಸಂಗ್ ಹ್ಯಾಪಿ ಅವರ್ ಸೇಲ್ ಶುರು

ದಕ್ಷಿಣ ಕೊರಿಯಾದ ತಂತ್ರಜ್ಞಾನ ಕಂಪನಿ ಸ್ಯಾಮ್ಸಂಗ್ ಹ್ಯಾಪಿ ಅವರ್ ಸೇಲ್ ಎರಡನೇ ಆವೃತ್ತಿ ಘೋಷಣೆ ಮಾಡಿದೆ. ಮೊದಲ ಬಾರಿ ಎರಡನೇ ಆವೃತ್ತಿ ಸೇಲ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಹಾಗಾಗಿ ಎರಡನೇ ಬಾರಿ ಈ ಸೇಲ್ ಶುರುಮಾಡಿರುವುದಾಗಿ ಕಂಪನಿ ಹೇಳಿದೆ.

ಡಿಸೆಂಬರ್ 19ರ ಮಧ್ಯಾಹ್ನ 12 ಗಂಟೆಗೆ ಇ-ಕಾಮರ್ಸ್ ಕಂಪನಿ ಅಮೆಜಾನ್ ಇಂಡಿಯಾದಲ್ಲಿ ಹ್ಯಾಪಿ ಅವರ್ ಸೇಲ್ ಎರಡನೇ ಆವೃತ್ತಿ ಶುರುವಾಗಿದೆ. ಮಧ್ಯಾಹ್ನ 2 ಗಂಟೆಯವರೆಗೆ ಈ ಸೇಲ್ ಇರಲಿದೆ. ಈ ಸೇಲ್ ನಲ್ಲಿ ಗ್ರಾಹಕರು ಸ್ಯಾಮ್ಸಂಗ್ ಒನ್ ಸರಣಿಯ ಸ್ಮಾರ್ಟ್ಫೋನನ್ನು ಅಗ್ಗದ ಬೆಲೆಗೆ ಖರೀದಿ ಮಾಡಬಹುದಾಗಿದೆ.

Galaxy On5 Pro ಗ್ರಾಹಕರಿಗೆ 6,990 ರೂಪಾಯಿಗೆ ಸಿಗ್ತಿದೆ. Galaxy On7 Pro ಫೋನ್ ಸೇಲ್ ವೇಳೆ ಗ್ರಾಹಕರಿಗೆ 7,490 ರೂಪಾಯಿಗೆ ಸಿಗ್ತಿದೆ. ಇದ್ರ ಜೊತೆಗೆ ರಿಲಾಯನ್ಸ್ ಜಿಯೋ ಕೂಡ ತನ್ನ ಆಫರ್ ಘೋಷಣೆ ಮಾಡಿದೆ. 90ಜಿಬಿ ಹೆಚ್ಚುವರಿ 4ಜಿ ಡೇಟಾ ನೀಡ್ತಿದೆ. 309 ರೂಪಾಯಿ ರಿಚಾರ್ಜ್ ಮಾಡಿದವರಿಗೆ 10ಜಿಬಿ ಡೇಟಾ ಪ್ರತ್ಯೇಕವಾಗಿ ಸಿಗ್ತಿದೆ. 509 ರೂಪಾಯಿ ರಿಚಾರ್ಜ್ ಮಾಡಿದ ಗ್ರಾಹಕರಿಗೆ 15ಜಿಬಿ 4ಜಿ ಡೇಟಾ ಹೆಚ್ಚುವರಿಯಾಗಿ ಸಿಗಲಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...