alex Certify
ಕನ್ನಡ ದುನಿಯಾ       Mobile App
       

Kannada Duniya

10 ಸಾವಿರ ರೂ.ಗೆ ಸಿಗ್ತಿದೆ 73 ಸಾವಿರ ರೂ. ಬೆಲೆಯ ಗ್ಯಾಲಕ್ಸಿ ಎಸ್ 9

ಸ್ಯಾಮ್ಸಂಗ್ ತನ್ನ ಪ್ರಮುಖ ಸ್ಮಾರ್ಟ್ಫೋನ್ ಗಳಲ್ಲಿ ಒಂದಾದ ಗ್ಯಾಲಕ್ಸಿ ಎಸ್ 9 ಹಾಗೂ ಎಸ್ 9 ಪ್ಲಸ್ ಸ್ಮಾರ್ಟ್ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಗ್ಯಾಲಕ್ಸಿ ಎಸ್ 9, 256 ಜಿಬಿ ಫೋನ್ ಬೆಲೆ 57,900 ರೂಪಾಯಿ. ಎಸ್ 9 ಪ್ಲಸ್ 256 ಜಿಬಿ ಫೋನ್ ಬೆಲೆ 72,900 ರೂಪಾಯಿ.

ಈ ದುಬಾರಿ ಬೆಲೆ ಫೋನನ್ನು ಕೇವಲ 10 ಸಾವಿರಕ್ಕೆ ಮನೆಗೆ ತೆಗೆದುಕೊಂಡು ಹೋಗುವ ಅವಕಾಶ ಸಿಗ್ತಿದೆ. ಇದಕ್ಕೆ ಸಂಬಂಧಿಸಿದಂತೆ ದಕ್ಷಿಣ ಕೊರಿಯಾ ಮೂಲದ ಕಂಪನಿ ಸ್ಯಾಮ್ಸಂಗ್, ಏರ್ಟೆಲ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಏರ್ಟೆಲ್ ಗ್ರಾಹಕರು 9,900 ರೂಪಾಯಿ ನೀಡಿ ಈ ಫೋನ್ ಖರೀದಿ ಮಾಡಬಹುದಾಗಿದೆ. ಇದ್ರ ಜೊತೆ ಗ್ರಾಹಕರಿಗೆ ಡೇಟಾ ಪ್ಲಾನ್ ಹಾಗೂ ಉಳಿದ ಸೌಲಭ್ಯ ಕೂಡ ಸಿಗಲಿದೆ.

ಗ್ರಾಹಕರು 9,900 ರೂಪಾಯಿ ಡೌನ್ ಪೇಮೆಂಟ್ ನಂತ್ರ 24 ತಿಂಗಳುಗಳ ಕಾಲ 2499 ರೂಪಾಯಿ ತುಂಬಬೇಕಾಗುತ್ತದೆ. ಗ್ಲೋಬಲ್ ಎಸ್ 9 ಹಾಗೂ ಎಸ್ 9 ಪ್ಲಸ್ ಸ್ಮಾರ್ಟ್ಫೋನ್ ಖರೀದಿ ಮಾಡಿದ ಗ್ರಾಹಕರಿಗೆ ಡಬಲ್ ಡೇಟಾ ಸಿಗಲಿದೆ. ಏರ್ಟೆಲ್ 199, 499, 799 ಮತ್ತು 999 ರೂಪಾಯಿ ಪ್ಲಾನ್ ನಲ್ಲಿ 3ಜಿ/4ಜಿ ಡೇಟಾ ಜೊತೆ ಅಮೆಜಾನ್ ಸದಸ್ಯತ್ವ ಹಾಗೂ ಅನಿಯಮಿತ ಕಾಲ್ ಸೌಲಭ್ಯ ನೀಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...